ತಿರುವನಂತಪುರಂ: ಪ್ರಕರಣದ ತನಿಖಾ ವಿವರಗಳನ್ನು ಮಾಧ್ಯಮಗಳಿಗೆ ಬಹಿರಂಗಪಡಿಸಬೇಡಿ ಎಂದು ರಾಜ್ಯ ಪೆÇಲೀಸ್ ಮುಖ್ಯಸ್ಥರು ಪೆÇಲೀಸ್ ಅಧಿಕಾರಿಗಳಿಗೆ ಸುತ್ತೋಲೆ ಹೊರಡಿಸಿದ್ದಾರೆ. ಆರೋಪಿಗಳ ತಪ್ಪೊಪ್ಪಿಗೆಗಳನ್ನು ಬಹಿರಂಗಪಡಿಸಬಾರದೆಂದು ಸೂಚನೆಯಲ್ಲಿ ನಿರ್ದೇಶಿಸಿಲಾಗಿದೆ.
ಈ ಸುತ್ತೋಲೆಯು ಹೈಕೋರ್ಟ್ ನಿರ್ದೇಶನದಂತೆ ಎಂದು ಡಿಜಿಪಿ ರಾವಡ ಚಂದ್ರಶೇಖರ್ ವಿವರಿಸಿದ್ದಾರೆ. ಈ ನಿರ್ದೇಶನವು ಎಸ್‍ಎಚ್‍ಒಗಳು ಸೇರಿದಂತೆ ಪೋಲೀಸ್ ಅಧಿಕಾರಿಗಳಿಗೆ ನೀಡಲಾಗಿದೆ.
ರಾಜ್ಯ ಪೋಲೀಸ್ ಮುಖ್ಯಸ್ಥರು ಕಳೆದ ಬುಧವಾರ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಇತ್ತೀಚಿನ ಪ್ರಕರಣವೊಂದರಲ್ಲಿ ಆರೋಪಿಯು ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಮತ್ತು ಅದು ವರದಿಯಾಗಿದೆ ಎಂದು ತನಿಖಾಧಿಕಾರಿ ಮಾಧ್ಯಮಗಳಿಗೆ ಬಹಿರಂಗಪಡಿಸಿದ್ದಾರೆ ಎಂದು ಹೈಕೋರ್ಟ್ ಪ್ರಾಸಿಕ್ಯೂಷನ್ ಮಹಾನಿರ್ದೇಶಕರಿಗೆ ಸೂಚಿಸಿತ್ತು.
ತನಿಖಾ ಹಂತದಲ್ಲಿ ಆರೋಪಿಗಳು ಹೇಳಿರುವ ವಿಷಯಗಳು ತನಿಖೆ ಮತ್ತು ವಿಚಾರಣೆಯ ಮೇಲೆ ಪರಿಣಾಮ ಬೀರುತ್ತವೆ ಎಂದು ನ್ಯಾಯಾಲಯ ಸೂಚಿಸಿತ್ತು.
ತರುವಾಯ, ಪ್ರಾಸಿಕ್ಯೂಷನ್ ಮಹಾನಿರ್ದೇಶಕರ ಪತ್ರದ ಆಧಾರದ ಮೇಲೆ ತನಿಖಾ ವಿವರಗಳನ್ನು ಬಹಿರಂಗಪಡಿಸಬಾರದು ಎಂದು ಪೆÇಲೀಸ್ ಮುಖ್ಯಸ್ಥರು ಸುತ್ತೋಲೆ ಹೊರಡಿಸಿದರು.




