ಕೊಚ್ಚಿ: ಸಿಪಿಎಂ ನಾಯಕಿ ಕೆ.ಜೆ ಶೈನ್ ಅವರನ್ನು ಸಾಮಾಜಿಕ ಮಾಧ್ಯಮದ ಮೂಲಕ ಅವಮಾನಿಸಿದ ಪ್ರಕರಣದಲ್ಲಿ ಪರವೂರಿನ ಕಾಂಗ್ರೆಸ್ ನಾಯಕ ಸಿ.ಕೆ. ಗೋಪಾಲಕೃಷ್ಣನ್ ಅವರನ್ನು ಪೆÇಲೀಸರು ಬಂಧಿಸಿದ್ದಾರೆ.
ಗೋಪಾಲಕೃಷ್ಣನ್ ಅವರನ್ನು ಎರ್ನಾಕುಳಂ ಗ್ರಾಮೀಣ ಸೈಬರ್ ಪೋಲೀಸರು ಬಂಧಿಸಿದ್ದಾರೆ. ನಂತರ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಯಿತು. ಗೋಪಾಲಕೃಷ್ಣನ್ ಈ ಪ್ರಕರಣದಲ್ಲಿ ಮೊದಲ ಆರೋಪಿ. ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡವು ಅವರ ಮೊಬೈಲ್ ಪೋನ್ ಅನ್ನು ಮೊದಲೇ ವಶಪಡಿಸಿಕೊಂಡಿತ್ತು.
ಗೋಪಾಲಕೃಷ್ಣನ್ ಅವರು ಅಪಪ್ರಚಾರ ಮಾಡಲು ಬಳಸುತ್ತಿದ್ದ ಅವರ ಫೇಸ್‍ಬುಕ್ ಖಾತೆಯನ್ನು ಸಹ ಮೆಟಾ ತೆಗೆದುಹಾಕಿದೆ. ಖಾತೆಯನ್ನು ತೆಗೆದುಹಾÀುವಂತೆ ಒತ್ತಾಯಿಸಿ ತನಿಖಾ ತಂಡವು ಮೆಟಾಗೆ ಪತ್ರ ಬರೆದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.

