HEALTH TIPS

ಭಾರತ- ಭೂತಾನ್ ಸಂಪರ್ಕಕ್ಕೆ ವಿಶೇಷ ರೈಲ್ವೆ ಯೋಜನೆ

ನವದೆಹಲಿ: ಭಾರತ ಮತ್ತು ಭೂತಾನ್ ನಡುವೆ ಮೊಟ್ಟಮೊದಲ ರೈಲು ಸಂಪರ್ಕವನ್ನು ಕಲ್ಪಿಸುವ ಯೋಜನೆಯ ಭೂಸ್ವಾಧೀನವನ್ನು ತ್ವರಿತಗೊಳಿಸುವ ನಿಟ್ಟಿನಲ್ಲಿ ಪ್ರಸ್ತಾವಿತ 69 ಕಿಲೋಮೀಟರ್ ಉದ್ದದ ಕೊಕ್ರಝಾರ್- ಗೆಲೆಫು ನಡುವಿನ ರೈಲು ಹಳಿ ಯೋಜನೆಯನ್ನು ವಿಶೇಷ ರೈಲ್ವೆ ಯೋಜನೆಯಾಗಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.

ನಾರ್ತ್‌ಈಸ್ಟ್ ಫ್ರಾಂಟಿಯರ್ ರೈಲ್ವೆ ಈ ಸಂಬಂಧ ರೈಲ್ವೆ ಕಾಯ್ದೆ-1989ರ ಅಡಿಯಲ್ಲಿ ಅಧಿಸೂಚನೆ ಹೊಡಿಸಲಾಗಿದ್ದು, ಸರ್ಕಾರದ ಆಯಕ್ಟ್ ಈಸ್ಟ್ ನೀತಿಗೆ ಅನುಗುಣವಾಗಿ ಈ ಯೋಜನೆಯನ್ನು ಆದ್ಯತೆಯ ಮೇಲೆ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಳೆದ ವರ್ಷದ ಮಾರ್ಚ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೂತಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ರೈಲು ಸಂಪರ್ಕವನ್ನು ಕಲ್ಪಿಸುವ ಯೋಜನೆಗೆ ಒಪ್ಪಿಗೆ ನೀಡಲಾಗಿತ್ತು. ಕೊಕ್ರಝಾರ್-ಗುಲೇಫು ಮತ್ತು ಬನರ್ಹಾತ್- ಸಂಸ್ಥೆ ನಡುವೆ ಎರಡು ರೈಲುಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಬನರ್ಹಾತ್- ಸ್ಯಾಮ್ತ್ಸೆ ನಡುವಿನ 16 ಕಿಲೋಮೀಟರ್ ಉದ್ದದ ರೈಲು ಹಳಿ ಭೂತಾನ್ ಹಾಗೂ ಪಶ್ಚಿಮ ಬಂಗಾಳದ ನಡುವೆ ಸಂಪರ್ಕ ಕಲ್ಪಿಸಲಿದೆ.

ಇದು ಭೂತಾನ್ ಗೆ ಮೊಟ್ಟಮೊದಲ ರೈಲ್ವೆ ಸಂಪರ್ಕವಾಗಲಿದೆ. ಈ ಯೋಜನೆಗೆ ವಿಶೇಷ ಮಹತ್ವ ಇದ್ದು, ರಾಷ್ಟ್ರೀಯ ಭದ್ರತೆಯನ್ನು ಮತ್ತಷ್ಟು ಬಲಗೊಳಿಸಲಿದೆ ಹಾಗೂ ಸುಧಾರಿತ ಸಂಪರ್ಕದ ಮೂಲಕ ಸಾಮಾಜಿಕ- ಆರ್ಥಿಕ ಪ್ರಗತಿಗೆ ಪೂರಕವಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries