ಬದಿಯಡ್ಕ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯ ನಾರಂಪಾಡಿಯ ಶಾಖೆಯಲ್ಲಿ ಮಾತೃಧ್ಯಾನ, ಮಾತೃವಂದನಾ ಮತ್ತು ಮಾತೃ ಭೋಜನ ಕಾರ್ಯಕ್ರಮ ಜರಗಿತು. ಭಜನೆ, ಆಟೋಟ, ಅನುಭವ ಹಂಚಿಕೆ, ವರದಿವಾಚನದೊಂದಿಗೆ ಮಾತೃಧ್ಯಾನ, ಮಾತೃವಂದನಾ ಹಾಗೂ ಮಾತೃಭೋಜನ ಕಾರ್ಯಕ್ರಮ ಜರಗಿತು. ವೈಯಕ್ತಿಕ ಮತ್ತು ಸಾಮೂಹಿಕ ಪ್ರಾರ್ಥನೆ ನಡೆಯಿತು.
ಸಂಧ್ಯಾ ಪಾರ್ವತಿ ಪುದ್ಯೋಡು ಅಧ್ಯಕ್ಷತೆ ವಹಿಸಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಹುಟ್ಟು, ಬೆಳವಣಿಗೆ ಹಾಗೂ ಉದ್ದೇಶಗಳ ಕುರಿತು ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಕಾವೂರು ನಗರದ ಅನಿತಾ ಮುಖ್ಯ ಅತಿಥಿಗಳಾಗಿ ಅಮ್ಮನ ಮಹತ್ವ, ಸಂಸ್ಕಾರಗಳ ಕುರಿತು ಮಾತನಾಡಿ ಮಾತೃಧ್ಯಾನದ ನೇತೃತ್ವ ವಹಿಸಿದರು. ಅಧ್ಯಾಪಿಕೆ ಜ್ಯೋತ್ಸ್ನಾ ಕಡಂದೇಲು ಪುರಾಣಗಳಲ್ಲಿ ಬಂದ ಅಮ್ಮಂದಿರ ತ್ಯಾಗ ಸೇವೆಗಳನ್ನು ನೆನಪಿಸಿದರು. ಪತಂಜಲಿ ಯೋಗಶಿಕ್ಷಣ ಸಮಿತಿಯ ಹಿರಿಯರಾದ ಜಯರಾಮ, ಸದ್ಯೋಜಾತ ಹಾಗೂ ಇತರರು ಭಾಗವಹಿಸಿದ್ದರು. ನೂರಕ್ಕಿಂತಲೂ ಹೆಚ್ಚು ಯೋಗಬಂಧುಗಳು ಹಾಗೂ ಯೋಗೇತರ ಬಂಧುಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

.jpg)
