ಕಳೆದ ಭಾನುವಾರ ದಿಲ್ಲಿಯ ಇಂದಿರಾ ಗಾಂಧಿ ವಿಮಾನ ನಿಲ್ದಾಣದಿಂದ ದಿಮಾಪುರಕ್ಕೆ ತೆರಳಲು ಸಜ್ಜಾಗುತ್ತಿದ್ದ ಇಂಡಿಗೋ ವಿಮಾನದಲ್ಲಿಯ ಪ್ರಯಾಣಿಕರೋರ್ವರ ಪವರ್ ಬ್ಯಾಂಕ್‌ಗೆ ಬೆಂಕಿ ಹತ್ತಿಕೊಂಡಿದ್ದು ವರದಿಯಾದ ಬಳಿಕ ಲೀಥಿಯಂ ಬ್ಯಾಟರಿ ಚಾಲಿತ ಸಾಧನಗಳ ಕುರಿತು ಹೆಚ್ಚುತ್ತಿರುವ ಸುರಕ್ಷತಾ ಕಳವಳಗಳ ನಡುವೆ ಈ ಬೆಳವಣಿಗೆ ನಡೆದಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿರಲಿಲ್ಲ, ಕ್ಯಾಬಿನ್ ಸಿಬ್ಬಂದಿ ತ್ವರಿತವಾಗಿ ಬೆಂಕಿಯನ್ನು ನಂದಿಸಿದ್ದರು.
ಪ್ರಯಾಣಿಕರು ಮತ್ತು ವಿಮಾನ ಯಾನ ಸಂಸ್ಥೆಗಳು ವಿಮಾನಗಳಲ್ಲಿ ಹೇಗೆ ಪವರ್ ಬ್ಯಾಂಕ್‌ಗಳನ್ನು ನಿರ್ವಹಿಸುತ್ತಿದ್ದಾರೆ ಎಂಬ ಬಗ್ಗೆ ಸಮಗ್ರ ಪರಿಶೀಲನೆಯನ್ನು ಡಿಜಿಸಿಎ ಆರಂಭಿಸಿದೆ. ಈ ಪರಿಶೀಲನೆಯು ವಿಮಾನದಲ್ಲಿ ಪವರ್ ಬ್ಯಾಂಕ್ ಬಳಕೆ ಮೇಲೆ ನಿಷೇಧ, ವಿದ್ಯುತ್ ಸಾಮರ್ಥ್ಯದ ಮೇಲೆ ಕಡ್ಡಾಯ ನಿರ್ಬಂಧ ಅಥವಾ ಅಪಾಯಗಳನ್ನು ಪರಿಣಾಮಕಾರಿಯಾಗಿ ತಗ್ಗಿಸಲು ಸಾಧ್ಯವಾಗದಿದ್ದರೆ ಅದರ ಸಾಗಣೆಯನ್ನು ಸಂಪೂರ್ಣವಾಗಿ ನಿಷೇಧಿಸಲೂ ಕಾರಣವಾಗಬಹುದು.
ಎಮಿರೇಟ್ಸ್ ಏರ್‌ಲೈನ್ಸ್ ಸೇರಿದಂತೆ ಹಲವು ವಿಮಾನಯಾನ ಸಂಸ್ಥೆಗಳು ಈಗಾಗಲೇ ವಿಮಾನಗಳಲ್ಲಿ ಪವರ್ ಬ್ಯಾಂಕ್ ಬಳಕೆಗೆ ಸಂಬಂಧಿಸಿದಂತೆ ಕಠಿಣ ನಿಯಮಗಳನ್ನು ಜಾರಿಗೊಳಿಸಿವೆ.




