ನವದೆಹಲಿ: 'ಗಾಜಾದಲ್ಲಿ ಶಾಂತಿ ಸ್ಥಾಪನೆಯ ಬಳಿಕ ಆ ಭಾಗದ ಪುನರ್ ನಿರ್ಮಾಣ ಕಾರ್ಯದಲ್ಲಿ ಭಾರತಕ್ಕೆ ಅನುವು ಮಾಡಿಕೊಡಲಾಗುವುದು. ಮಧ್ಯಪ್ರಾಚ್ಯದಲ್ಲಿ ಶಾಂತಿ ಮರುಸ್ಥಾಪಿಸುವಲ್ಲಿ ನವದೆಹಲಿಯೂ ಧನಾತ್ಮಕ ಪಾತ್ರ ವಹಿಸಿದೆ' ಎಂದು ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೇನ್ ಅಜರ್ ತಿಳಿಸಿದ್ದಾರೆ.
ಗಾಜಾದಲ್ಲಿ ಶಾಂತಿ ಸ್ಥಾಪನೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯವನ್ನು ರುವೆನ್ ಸ್ವಾಗತಿಸಿದ್ದಾರೆ. ಆ ಪ್ರಾಂತ್ಯದ ಮರು ನಿರ್ಮಾಣದಲ್ಲಿ ಭಾರತವು ಮಹತ್ವ ಪಾತ್ರ ವಹಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಗಾಜಾದಲ್ಲಿ ಆರ್ಥಿಕ ಯೋಜನೆ ಜಾರಿಗೊಳಿಸಲು ಭಾರತವು ತನ್ನ ಕೊಡುಗೆಯನ್ನು ನೀಡಬಹುದಾಗಿದೆ. ಅಲ್ಲದೇ, ಪುನರ್ ನಿರ್ಮಾಣ ಕಾರ್ಯದಲ್ಲಿಯೂ ಭಾಗಿಯಾಗಲಿದೆ' ಎಂದು ಹೇಳಿದ್ದಾರೆ.




