ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಭಾರತೀಯರಿಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೀಪಾವಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.
ಈ ಸಂಬಂಧ ಇಸ್ರೇಲ್ ಪ್ರಧಾನಿ ಕಾರ್ಯಾಯಲದ ಪ್ರಕಟಣೆ ತಿಳಿಸಿದೆ.
'ನನ್ನ ಸ್ನೇಹಿತ ನರೇಂದ್ರ ಮೋದಿ ಹಾಗೂ ಭಾರತೀಯ ಜನತೆಗೆ ದೀಪಾವಳಿ ಹಬ್ಬದ ಶುಭಾಶಯಗಳು.
ಬೆಳಕಿನ ಹಬ್ಬವು ನಿಮ್ಮ ಮಹಾನ್ ದೇಶಕ್ಕೆ ಭರವಸೆ, ಶಾಂತಿ ಹಾಗೂ ಸಮೃದ್ಧಿಯನ್ನು ತರಲಿ' ಎಂದಿದ್ದಾರೆ.
'ಇಸ್ರೇಲ್ ಹಾಗೂ ಭಾರತ ಸದಾ ಒಗ್ಗಟ್ಟಾಗಿ ನಿಲುತ್ತದೆ. ನಾವೀನ್ಯತೆ, ಗೆಳೆತನ, ರಕ್ಷಣೆ ಹಾಗೂ ಉಜ್ವಲ ಭವಿಷ್ಯದ ಪಾಲುದಾರರಾಗಿದ್ದಾರೆ' ಎಂದು ಅವರು ಉಲ್ಲೇಖಿಸಿದ್ದಾರೆ.




