ಟ್ರಂಪ್ ಅವರನ್ನು ಮೆಚ್ಚಿಸಲು ವಿದೇಶಿ ನಾಯಕರು ಇಂಥ ಭರವಸೆ ನೀಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ.
ಕಳೆದ ಕೆಲ ತಿಂಗಳುಗಳಲ್ಲಿ ಕೆಲವರು ನಾಮನಿರ್ದೇಶನವನ್ನು ಬೆಂಬಲಿಸಿದರೆ, ಇನ್ನೂ ಕೆಲವರು ಹಾಗೆ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಕಾಂಬೋಡಿಯಾದ ಪ್ರಧಾನಿ ಹುನ್ ಮನೇತ್ ಅವರೂ ಟ್ರಂಪ್ ಅವರ ಹೆಸರನ್ನು ನಾಮನಿರ್ದೇಶನ ಮಾಡುವುದಾಗಿ ಸೋಮವಾರ ಹೇಳಿಕೆ ನೀಡಿದ್ದರು. ಇದಕ್ಕೂ ಮೊದಲು ಪಾಕಿಸ್ತಾನದ ಪ್ರಧಾನ ಶೆಹಬಾಜ್ ಶರೀಫ್ ಅವರು ಇಂಥ ಹೇಳಿಕೆ ನೀಡಿ ಟ್ರಂಪ್ ಅವರನ್ನು ಮೆಚ್ಚಿಸಲು ಯತ್ನಿಸಿದ್ದರು.
2025ರ ನೋಬೆಲ್ ಶಾಂತಿ ಪ್ರಶಸ್ತಿ ಟ್ರಂಪ್ ಅವರಿಗೆ ಲಭಿಸಲಿಲ್ಲ. ಇಸ್ರೇಲ್ ಮತ್ತು ಹಮಾಸ್ ನಡುವೆ ಗಾಜಾದಲ್ಲಿ ನಡೆಯುತ್ತಿದ್ದ ಯುದ್ಧವನ್ನು ಕೊನೆಗಾಣಿಸಲು ಮಧ್ಯಸ್ಥಿಕೆ ವಹಿಸುವ ಮೊದಲೇ ನೊಬೆಲ್ ಪ್ರಶಸ್ತಿಯ ತೀರ್ಪುಗಾರರ ಮಂಡಳಿಯು ತನ್ನ ಆಯ್ಕೆಯನ್ನು ಅಂತಿಮಗೊಳಿಸಿತ್ತು ಎಂದು ಟ್ರಂಪ್ ಹೇಳಿಕೆ ನೀಡಿದ್ದರು.
ಡೊನಾಲ್ಡ್ ಟ್ರಂಪ್ ಅವರು ಮಂಗಳವಾರದಿಂದ ಏಷ್ಯಾ ಪ್ರವಾಸ ಕೈಗೊಂಡಿದ್ದಾರೆ. ಜಪಾನ್‌ನ ಹೊಸ ಪ್ರಧಾನಿ ಸನೇ ಅವರು ಟ್ರಂಪ್ ಅವರನ್ನು ಬರಮಾಡಿಕೊಂಡರು.




