ತಿರುವನಂತಪುರಂ: ಶಬರಿಮಲೆ ಯಾತ್ರಿಕರು ಬಳಸುವ ವಿವಿಧ ರಸ್ತೆಗಳ ನವೀಕರಣಕ್ಕಾಗಿ 377.8 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ. 10 ಜಿಲ್ಲೆಗಳ 82 ರಸ್ತೆಗಳಿಗೆ ಈ ಮೊತ್ತವನ್ನು ನಿಗದಿಪಡಿಸಲಾಗಿದೆ.
ತಿರುವನಂತಪುರಂ ಜಿಲ್ಲೆಯಲ್ಲಿ 14 ರಸ್ತೆಗಳಿಗೆ 68.90 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಕೊಲ್ಲಂನಲ್ಲಿ 15 ರಸ್ತೆಗಳಿಗೆ 54. 20 ಕೋಟಿ ರೂ.ಗಳು, ಪತ್ತನಂತಿಟ್ಟದಲ್ಲಿ ಆರು ರಸ್ತೆಗಳಿಗೆ 40.20 ಕೋಟಿ ರೂ.ಗಳು, ಆಲಪ್ಪುಳದಲ್ಲಿ ಒಂಬತ್ತು ರಸ್ತೆಗಳಿಗೆ 36 ಕೋಟಿ ರೂ.ಗಳು ಮತ್ತು ಕೊಟ್ಟಾಯಂನಲ್ಲಿ ಎಂಟು ರಸ್ತೆಗಳಿಗೆ 35.20 ಕೋಟಿ ರೂ.ಗಳನ್ನು ನಿಗದಿಪಡಿಸಲಾಗಿದೆ.
ಇಡುಕ್ಕಿಯಲ್ಲಿ ಐದು ರಸ್ತೆಗಳಿಗೆ 35.10 ಕೋಟಿ ರೂ., ಎರ್ನಾಕುಳಂನಲ್ಲಿ ಎಂಟು ರಸ್ತೆಗಳಿಗೆ 32.42 ಕೋಟಿ ರೂ., ತ್ರಿಶೂರ್‍ನಲ್ಲಿ 11 ರಸ್ತೆಗಳಿಗೆ 44 ಕೋಟಿ ರೂ., ಪಾಲಕ್ಕಾಡ್‍ನಲ್ಲಿ ಐದು ರಸ್ತೆಗಳಿಗೆ 27.30 ಕೋಟಿ ರೂ. ಮತ್ತು ಮಲಪ್ಪುರಂನಲ್ಲಿ ಒಂದು ರಸ್ತೆಗೆ 4.50 ಕೋಟಿ ರೂ. ಹಂಚಿಕೆ ಮಾಡಲಾಗಿದೆ ಎಂದು ಹಣಕಾಸು ಸಚಿವ ಕೆ.ಎನ್. ಬಾಲಗೋಪಾಲ್ ತಿಳಿಸಿದ್ದಾರೆ.




