ತಿರುವನಂತಪುರಂ: ಕೇರಳ ಲಾಟರಿಯ ಪೂಜಾ ಬಂಪರ್ ಟಿಕೆಟ್ ಡ್ರಾ ಇಂದು ನಡೆದಿದ್ದು, ಮೊದಲ ಬಹುಮಾನವಾಗಿ 12 ಕೋಟಿ ರೂ. ಸಹಿತ ವಿವಿಧ ಬಹುಮಾನಗಳು ಲಾಟರಿ ಗ್ರಾಹಕರ ಕೈಸೇರಲಿದೆ.
ಪಾಲಕ್ಕಾಡ್‍ನಲ್ಲಿ ಮಾರಾಟವಾದ ಟಿಕೆಟ್ ಸಂಖ್ಯೆ ಜೆಡಿ 545542 ಗೆ 12 ಕೋಟಿ ರೂ.ಗಳ ಮೊದಲ ಬಹುಮಾನ ಬಂದಿದೆ.
ಜೆಎ 838734, ಜೆಬಿ 124349, ಜೆಸಿ 385583, ಜೆಡಿ 676775, ಜೆಇ 553135 ಟಿಕೆಟ್ ಸಂಖ್ಯೆಗಳಿಗೆ ತಲಾ 1 ಕೋಟಿ ರೂ.ಗಳ ಎರಡನೇ ಬಹುಮಾನ ಐದು ಜನರಿಗೆ ದಕ್ಕಿದೆ.
ಮೂರನೇ ಬಹುಮಾನ 50 ಲಕ್ಷ ರೂ.ಗಳನ್ನು ಹತ್ತು ಜನರಿಗೆ ನೀಡಲಾಗುವುದು. ಮೂರನೇ ಬಹುಮಾನವು ಜೆಎ 399845, ಜೆಬಿ 661634, ಜೆಸಿ 175464, ಜೆಡಿ 549209, ಜೆಇ 264942, ಜೆಎ 369495, ಜೆಬಿ 556571, ಜೆಸಿ 732838, ಜೆಡಿ 354656, ಜೆಇ 824957 ಸಂಖ್ಯೆಗಳ ಟಿಕೆಟ್‍ಗಳಿಗೆ. ಪ್ರತಿಯೊಬ್ಬರಿಗೂ 50 ಲಕ್ಷ ರೂ. ನೀಡಲಾಗುವುದು.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗೆ ಮಾದರಿ ನೀತಿ ಸಂಹಿತೆ ಇರುವುದರಿಂದ ಯಾವುದೇ ಔಪಚಾರಿಕ ಸಮಾರಂಭವಿಲ್ಲದೆ ಘೋಷಣೆ ಮಾಡಲಾಗಿದೆ.




