HEALTH TIPS

ಒಂದೇ ವಾರದಲ್ಲಿ ಅಫ್ಗನ್‌ ಪ್ರಜೆಗಳ ಬಂಧನ ಶೇ146ರಷ್ಟು ಹೆಚ್ಚಳ: ವಿಶ್ವಸಂಸ್ಥೆ ವರದಿ

ಪೇಶಾವರ್‌: 'ಗಡಿ ದಾಟುವಿಕೆಗೆ ಪಾಕಿಸ್ತಾನವು ಪುನರ್‌ ಅವಕಾಶ ಕಲ್ಪಿಸಿದ ಬಳಿಕ ಅಫ್ಗನ್‌ ಪ್ರಜೆಗಳ ಬಂಧನದ ಪ್ರಮಾಣವು ಶೇಕಡ 146ರಷ್ಟು ಏರಿಕೆಯಾಗಿದೆ' ಎಂದು ವಿಶ್ವಸಂಸ್ಥೆಯ ವರದಿಯು ತಿಳಿಸಿದೆ.

ಒಂದು ವಾರದಲ್ಲಿ 7,764 ಅಫ್ಗನ್‌ ನಾಗರಿಕರನ್ನು ಬಂಧಿಸಲಾಗಿದೆ. ಈ ಹಿಂದಿನ ವಾರಕ್ಕೆ ಹೋಲಿಸಿದರೆ, ತೀವ್ರತರದಲ್ಲಿ ಏರಿಕೆಯಾಗಿದೆ ಎಂದು ವಿಶ್ವಸಂಸ್ಥೆಯ ಪುನರ್‌ವಸತಿಯ ಹೈ ಕಮಿಷನರ್‌ ಹಾಗೂ ಅಂತರರಾಷ್ಟ್ರೀಯ ವಲಸೆ ಸಂಸ್ಥೆಯು ಬಿಡುಗಡೆಗೊಳಿಸಿದ ಇತ್ತೀಚಿಗಿನ ವರದಿಯಲ್ಲಿ ತಿಳಿಸಿದೆ.

ಬಲೂಚಿಸ್ತಾನವನ್ನು ಕೇಂದ್ರಿಕರಿಸಿ, ಪಾಕಿಸ್ತಾನವು ದಮನ ಕಾರ್ಯಾಚರಣೆ ನಡೆಸಿತ್ತು. ಬಂಧಿತರಲ್ಲಿ ಶೇಕಡಾ 86ರಷ್ಟು ಮಂದಿ ಅಲ್ಲಿ ನೆಲಸಿದವರೇ ಸೇರಿದ್ದಾರೆ.

'ಅಕ್ಟೋಬರ್‌ 26ರಿಂದ ನವೆಂಬರ್‌ 1ರವರೆಗೆ ನಡೆದ ಬಂಧಿತರಲ್ಲಿ ಅಫ್ಗನ್‌ ಪೌರತ್ವ ಕಾರ್ಡ್‌ ಹೊಂದಿದ ಹಾಗೂ ಯಾವುದೇ ದಾಖಲೆ ಹೊಂದಿರದ ಅಫ್ಗಾನಿಸ್ತಾನದ ನಿವಾಸಿಗಳ ಸಂಖ್ಯೆ ಶೇ 77ರಷ್ಟಿದ್ದು, ನೋಂದಣಿ ಕಾರ್ಡ್‌ ಹೊಂದಿರದ ವ್ಯಕ್ತಿಗಳು ಶೇಕಡಾ 23ರಷ್ಟಿದ್ದಾರೆ' ಎಂದು ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries