HEALTH TIPS

ಒಹಿಯೊ ಗವರ್ನರ್ ಸ್ಥಾನಕ್ಕೆ ಸ್ಪರ್ಧೆ: ಭಾರತ ಮೂಲದ ವಿವೇಕ್‌ಗೆ ಟ್ರಂಪ್ ಬೆಂಬಲ

ವಾಷಿಂಗ್ಟನ್: ಒಹಿಯೊ ರಾಜ್ಯದ ಗವರ್ನರ್‌ ಸ್ಥಾನಕ್ಕೆ ಸ್ಪರ್ಧಿಸಿರುವ ರಿಪಬ್ಲಿಕನ್‌ ಪಕ್ಷದ ನಾಯಕ, ಭಾರತೀಯ ಮೂಲದ ವಿವೇಕ್‌ ರಾಮಸ್ವಾಮಿ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, 'ವಿವೇಕ್‌ ಅವರು ಒಹಿಯೊದ ಅತ್ಯುತ್ತಮ ಗವರ್ನರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ' ಎಂದು ಹೇಳಿದ್ದಾರೆ.

ಇದೇ ಸ್ಥಾನದಿಂದ ಸ್ಪರ್ಧಿಸಿ ನಾನು 2016, 2020 ಮತ್ತು 2024ರಲ್ಲಿ ಮೂರು ಬಾರಿ ಗೆದ್ದಿದ್ದೇನೆ' ಎಂದು ಟ್ರಂಪ್ ತಿಳಿಸಿದ್ದಾರೆ.

'ನಾನು, ವಿವೇಕ್ ಅವರ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇನೆ. ಅವರು ಯುವ, ಬಲಿಷ್ಠ, ಬುದ್ಧಿವಂತ ಹಾಗೂ ವಿಶೇಷ ವ್ಯಕ್ತಿ ಎಂದರೆ ತಪ್ಪಲ್ಲ. ವಿವೇಕ್ ಅವರು ನಮ್ಮ ದೇಶವನ್ನು ನಿಜವಾಗಿಯೂ ಪ್ರೀತಿಸುತ್ತಾರೆ' ಎಂದು ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

'ವಿವೇಕ್ ಅವರು ಮುಂದಿನ ಗವರ್ನರ್ ಆಗಿ ಆರ್ಥಿಕತೆಯನ್ನು ಬೆಳೆಸಲು, ತೆರಿಗೆಗಳು ಮತ್ತು ಕಠಿಣ ನಿಯಮಗಳನ್ನು ಕಡಿತಗೊಳಿಸಲು, ಮೇಡ್ ಇನ್ ದಿ ಯುಎಸ್‌ಎ, ಚಾಂಪಿಯನ್ ಅಮೇರಿಕನ್ ಎನರ್ಜಿ ಡಾಮಿನೆನ್ಸ್ ಅನ್ನು ಉತ್ತೇಜಿಸಲು, ಗಡಿಗಳನ್ನು ಕಾಪಾಡಿಕೊಳ್ಳಲು, ಸುರಕ್ಷಿತವಾಗಿರಿಸಲು, ಅಕ್ರಮ ವಲಸೆ ತಡೆಯಲು, ನಮ್ಮ ಸೇನೆಯನ್ನು ಬಲಪಡಿಸಲು, ಕಾನೂನು ಮತ್ತು ಸುವ್ಯವಸ್ಥೆಯನ್ನು ಖಚಿತಪಡಿಸಿಕೊಳ್ಳಲು, ಚುನಾವಣಾ ಸಮಗ್ರತೆಯನ್ನು ಹೆಚ್ಚಿಸಲು ಅವಿಶ್ರಾಂತವಾಗಿ ಶ್ರಮಿಸಲಿದ್ದಾರೆ' ಎಂದು ಟ್ರಂಪ್ ತಿಳಿಸಿದ್ದಾರೆ.

'ವಿವೇಕ್ ರಾಮಸ್ವಾಮಿ ಒಹಿಯೊ ರಾಜ್ಯದ ಶ್ರೇಷ್ಠ ಗವರ್ನರ್ ಆಗಿರುತ್ತಾರೆ. ಇದಕ್ಕೆ ನನ್ನ ಸಂಪೂರ್ಣ ಅನುಮೋದನೆಯೂ ಇದೆ. ಅವರು (ವಿವೇಕ್) ನಿಮ್ಮನ್ನು ಎಂದಿಗೂ ನಿರಾಸೆಗೊಳಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ' ಎಂದು ಟ್ರಂಪ್ ನುಡಿದಿದ್ದಾರೆ.

ರಾಮಸ್ವಾಮಿ ಅವರು 2024ರ ಅಧ್ಯಕ್ಷೀಯ ಚುನಾವಣೆಗೆ ರಿಪಬ್ಲಿಕಬ್‌ ಪಕ್ಷದಿಂದ ಸ್ಪರ್ಧಿಸಲು ಆಸಕ್ತರಾಗಿದ್ದರು. ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಸರ್ಕಾರದಲ್ಲಿ ವೆಚ್ಚ ನಿಯಂತ್ರಣ ಕ್ರಮಗಳಿಗೆ ಸಂಬಂಧಿಸಿದ ಇಲಾಖೆಯಲ್ಲಿ ಕೆಲ ಕಾಲ ರಾಮಸ್ವಾಮಿ ಅವರು ಕಾರ್ಯನಿರ್ವಹಿಸಿದ್ದರು.

ಒಹಿಯೊ ಗವರ್ನರ್ ಸ್ಥಾನಕ್ಕೆ ಸ್ಪರ್ಧಿಸಿರುವ ವಿವೇಕ್‌ಗೆ ಬೆಂಬಲಅಮೆರಿಕ: ಅನೌಪಚಾರಿಕ ಮತದಾನದಲ್ಲಿ ಅಗ್ರಸ್ಥಾನ ಪಡೆದ ವಿವೇಕ್‌ ರಾಮಸ್ವಾಮಿಹಿಂದು ಧರ್ಮದ ಮೇಲಿನ ನಂಬಿಕೆ ನನಗೆ ಸ್ವಾತಂತ್ರ್ಯ ನೀಡಿದೆ- ವಿವೇಕ್‌ ರಾಮಸ್ವಾಮಿಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದರೆ ಎಚ್‌-1ಬಿ ವೀಸಾ ರದ್ದು: ವಿವೇಕ್‌ ರಾಮಸ್ವಾಮಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries