ತಿರುವನಂತಪುರಂ: ತನ್ನ 16 ವರ್ಷದ ಪುತ್ರನನ್ನು ತಾಯಿ ಮತ್ತು ಮಲತಂದೆ ಭಯೋತ್ಪಾದಕ ಸಂಘಟನೆ ಐಸಿಸ್‍ಗೆ ಸೇರುವಂತೆ ಒತ್ತಾಯಿಸಿದ ಪ್ರಕರಣದಲ್ಲಿ ಮಗುವಿನ ತಾಯಿ ಪೋಲೀಸರ ಕಣ್ಗಾವಲಿನಲ್ಲಿದ್ದಾಳೆ. ಯುಕೆಯಲ್ಲಿದ್ದ ಮಹಿಳೆ ಎರಡು ವಾರಗಳ ಹಿಂದೆ ಕೇರಳಕ್ಕೆ ಮರಳಿದಾಗಿನಿಂದ ಪೋಲೀಸರ ಕಣ್ಗಾವಲಿನಲ್ಲಿದ್ದಾಳೆ. ಮಹಿಳೆ ನೆಡುಮಂಗಾಡ್‍ನ ಸ್ಥಳೀಯಳು ಎಂದು ಪೋಲೀಸರು ಸ್ಪಷ್ಟಪಡಿಸಿದ್ದಾರೆ.
ಮಹಿಳೆಯ ವಿರುದ್ಧ ಮಾಹಿತಿ ಸಂಗ್ರಹಿಸಲು ಎನ್‍ಐಎ ಕೂಡ ತನಿಖೆ ಆರಂಭಿಸಿದೆ. ಮಹಿಳೆ ತನ್ನ ಮೊದಲ ಮದುವೆಯಿಂದ ವಿಚ್ಛೇದನಗೊಂಡು ತನ್ನ ಮಗನೊಂದಿಗೆ ವಿದೇಶದಲ್ಲಿ ವಾಸಿಸುತ್ತಿದ್ದಳು. ದೂರಿನಲ್ಲಿ, ಐಸಿಸ್‍ನ ವಿವಿಧ ವೀಡಿಯೊಗಳನ್ನು ತೋರಿಸಿದ ನಂತರ, ತನ್ನ ಮಗನನ್ನು ಈ ಭಯೋತ್ಪಾದಕ ಸಂಘಟನೆಗೆ ಸೇರಲು ಒತ್ತಾಯಿಸಿದ್ದಳೆಂದು ಸಂಬಂಧಿಕರು ಹೇಳುತ್ತಾರೆ.
ಆದಾಗ್ಯೂ, ಮಗುವಿಗೆ ಐಸಿಸ್ ಸೇರಲು ಆಸಕ್ತಿ ಇದ್ದಿರಲಿಲ್ಲ. ಈ ಬಗ್ಗೆ ಮಗು ಮತ್ತು ತಾಯಿಯ ನಡುವೆ ವಾಗ್ವಾದ ನಡೆದಿರುವ ಸೂಚನೆಗಳೂ ಇವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆಯ ಗೆಳೆಯನ ಸಹೋದರನ ಮೇಲೂ ಪೋಲೀಸ್ ನಿಗಾ ಇಡಲಾಗಿದೆ. ಕನಕಮಲ ಐಎಸ್ ನೇಮಕಾತಿ ಪ್ರಕರಣದಲ್ಲಿ ಆತ ಆರೋಪಿಯಾಗಿದ್ದಾನೆ. ಈತನನ್ನು ಈ ಹಿಂದೆ ದೆಹಲಿಯಿಂದ ಬಂಧಿಸಲಾಗಿತ್ತು.





