ಕಾಸರಗೋಡು: ಮಂಗಳೂರು - ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಕುಂಬಳೆಯ ಆರಿಕ್ಕಾಡಿಯಲ್ಲಿ ಟೋಲ್ ಶುಲ್ಕ ವಸೂಲು ವಿರುದ್ದ ಹೋರಾಟ ಸಮಿತಿ ಹೈಕೋರ್ಟಿಗೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ.19ಕ್ಕೆ ಮುಂದೂಡಲಾಗಿದೆ.
ನ.12 ರಿಂದ ಶುಲ್ಕ ವಸೂಲಿಗೆ ಗುತ್ತಿಗೆ ಕಂಪೆನಿ ತೀರ್ಮಾನಿಸಿತ್ತು.
ಈ ನಡುವೆ ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ನೇತೃತ್ವದಲ್ಲಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಬಳಿಕ ಶುಲ್ಕ ವಸೂಲಿ ಮುಂದೂಡಲಾಗಿತ್ತು. ಟೋಲ್ ವಸೂಲಿಯನ್ನು ಹೈಕೋರ್ಟ್ ತೀರ್ಪು ಬರುವ ತನಕ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿತ್ತು.




