HEALTH TIPS

2,000 ವರ್ಷ ಬಳಿಕ ಊಸರವಳ್ಳಿಯ 360 ಡಿಗ್ರಿ ಕಣ್ಣಿನ ರಹಸ್ಯ ಬಯಲು ಮಾಡಿದ ಸಂಶೋಧಕರು

ಪ್ರಾಚೀನ ಗ್ರೀಕ್ ಕಾಲದಿಂದಲೂ ಅಂದರೆ ಬರೋಬ್ಬರಿ 2,000 ವರ್ಷಗಳಿಂದಲೂ ಊಸರವಳ್ಳಿ (Chameleons) ಕಣ್ಣುಗಳ ಕುರಿತ ಕುತೂಹಲ ಇದ್ದೇ ಇದೆ. ಈ ರಹಸ್ಯ ಬಯಲು ಮಾಡಲು ಹಲವು ಪ್ರಯತ್ನಗಳು ನಡೆದಿತ್ತು. ಇದೀಗ ವಿಜ್ಞಾನಿಗಳ ಪ್ರಮುಖ ಸಂಶೋಧನೆಯಲ್ಲಿ ಊಸರವಳ್ಳಿಯ 360 ಡಿಗ್ರಿ ಕಣ್ಣಿನ ರಹಸ್ಯ ಬಯಲಾಗಿದೆ.

ಊಸರವಳ್ಳಿಗಳು ಏಕಕಾದಲದಲ್ಲಿ ಎರಡು ದಿಕ್ಕುಗಳನ್ನು ನೋಡಲು ಸಾಧ್ಯವಿದೆ. ಸಾಮಾನ್ಯವಾಗಿ ಮನುಷ್ಯರು, ಪ್ರಾಣಿಗಳು, ಪಕ್ಷಿಗಳ ಎರಡು ಕಣ್ಣುಗಳ ನೋಟ ಒಂದೇ ಕಡೆ ಇರುತ್ತದೆ. ಆದರೆ ಊಸರವಳ್ಳಿ ಬೇರೆ ಬೇರೆ ದಿಕ್ಕಿನಲ್ಲಿ ನೋಡಲು ಸಾಧ್ಯವಾಗುತ್ತದೆ. ಊಸರವಳ್ಳಿಯ ಕಣ್ಣುಗಳ ರಚನೆ ಇತರ ಯಾವುದೇ ಹಲ್ಲಿ ಸೇರಿದಂತೆ ಈ ಜಾತಿಗೆ ಸೇರಿದ ಪ್ರಾಣಿಗಳಲ್ಲಿ ಕಾಣಸಿಗುವುದಿಲ್ಲ ಅನ್ನೋದು ಸಂಶೋಧನೆಯಲ್ಲಿ ಬಯಲಾಗಿದೆ. ಇದರ ನರಗಳ ರಚನೆ ಸೇರಿದಂತೆ ಎಲ್ಲವೂ ಭಿನ್ನವಾಗಿದೆ.

ಊಸರವಳ್ಳಿ ಕಣ್ಣುಗಳ ರಚನೆ ಭಿನ್ನ

ಊಸರವಳ್ಳಿಯ ಹೊರಗೆ ಚಾಚಿದಂತಿರುವ ಕಣ್ಣುಗಳ ಹಿಂದೆ ಸಪ್ತವರ್ಣ ನರಗಳಿರುವುದು ಪತ್ತೆಯಾಗಿದೆ. ಇದು ಉದ್ದವಾಗಿ ಸುತ್ತಿರುವ ರೀತಿಯಲ್ಲಿ ಕಣ್ಣುಗಳ ಹಿಂದಿದೆ. ಇದರಿಂದ ಕಣ್ಣುಗಳು 360 ಡಿಗ್ರಿ ಕ್ಯಾಮೆರಾ ರೀತಿ ಕಣ್ಣುಗಳನ್ನು ತಿರುಗಿಸಲು ನೆರವು ನೀಡುತ್ತದೆ. ಈ ಕುರಿತು ಸಂಶೋಧನಾ ಅಧ್ಯಯನ ನಡೆಸಿರುವ ಸ್ಯಾಮ್ ಹೂಸ್ಟನ್ ವಿಶ್ವವಿದ್ಯಾಲಯದ ಫ್ರೊಫೆಸರ್ ಹಾಗೂ ಲೇಖಕ ಜುವಾನ್ ಡಾಜ್ ಈ ಮಹತ್ವದ ಮಾಹಿತಿ ಬಹಿರಂಗಪಡಿಸಿದ್ದಾರೆ. ಊಸರವಳ್ಳಿಗಳು ಬೇಟೆ ಹುಡುಕುವಾಕ ಎರಡು ಕಣ್ಣಗಳು ಬೇರೆ ಬೇರೆ ದಿಕ್ಕಿನಲ್ಲಿ ಗಮನಹರಿಸುತ್ತದೆ. ಇಡೀ ಪರಿಸರವನ್ನು ಅಂದರೆ 360 ಡಿಗ್ರಿ ಮೂಲಕ ಪರಿಶೀಲನೆ ನಡೆಸುತ್ತದೆ. ಯಾವಾಗ ಬೇಟೆ ಕಾಣಸಿಗುತ್ತದೆ, ತಕ್ಷಣವೇ ಎರಡೂ ಕಣ್ಣುಗಳು ಬೇಟೆ ಇರುವ ದಿಕ್ಕಿನತ್ತ ಹೊಂದಿಕೆಯಾಗುತ್ತದೆ. ಬಳಿಕ ಬೇಟೆಯತ್ತ ಗುರಿ ಇಡುತ್ತದೆ ಎಂದು ಡಾಜ್ ಹೇಳಿದ್ದಾರೆ.

ಹಲವು ವರ್ಷಗಳ ಸಂಶೋಧನೆ

ಹಲವು ವರ್ಷಗಳಿಂದ ಊಸರವಳ್ಳಿಗಳ ಕಣ್ಣಿನ ರಚನೆ ಕುರಿತು ಸಂಶೋಧನೆ ನಡೆಯುತ್ತಲೇ ಇದೆ. ಈ ಪೈಕಿ 2017ರಲ್ಲೂ ಜುವಾನ್ ಡಾಜ್ ಈ ಕುರಿತು ಅಧ್ಯಯನ ನಡೆಸುತ್ತಲೇ ಸಾಗಿದ್ದರು. ಈ ವೇಳೆ ಕಣ್ಣಿನ ರಚನೆ ಕುರಿು ಮಹತ್ವದ ಮಾಹಿತಿ ಕಲೆ ಹಾಕಿದ್ದರು. ಕಣ್ಣಿನ ರಚನೆ ಕುರಿತು ಅದಾಗಲೇ ವಿಶೇಷತೆಯನ್ನು ಗಮನಿಸಿದ್ರು. ಇದೇ ವೇಳೆ ಫ್ಲೋರಿಡಾ ಮ್ಯೂಸಿಯಂ ಆಫ್ ನ್ಯಾಚುರಲ್ ಹಿಸ್ಟರಿಯ ಡಿಜಿಟಲ್ ಇಮೇಜಿಂಗ್ ಪ್ರಯೋಗಾಲಯದ ನಿರ್ದೇಶಕ ಎಡ್ವರ್ಡ್ ಸ್ಟಾನ್ಲಿ ಕೂಡ ಇದೇ ಢಾಜ್ ಪ್ರಯೋಗಾಲಯಕ್ಕೆ ಭೇಟಿ ನೀಡಿದ್ದರು. ಊಸರವಳ್ಳಿಯ ಕಣ್ಣುಗಳ ರಹಸ್ಯ ಹಾಗೂ ರಚನೆ ಕುರಿತು ಸಿಟಿ ಸ್ಕ್ಯಾನ್‌ನಲ್ಲಿ ಮಹತ್ವದ ಮಾಹಿತಿ ಲಭ್ಯವಾಗಿತ್ತು. ಆರಂಭದಲ್ಲೇ ಡಾಜ್ ಹಾಗೂ ಎಡ್ವರ್ಡ್‌ಗೆ ಅಂತಿಮ ನಿರ್ಧಾರಕ್ಕೆ ಬರಲು ಸಾಧ್ಯವಾಗಿಲ್ಲ. ಕಾರಣ ಕಣ್ಣಿನ ರಚನೆ ಅಚ್ಚರಿಯಾಗಿತ್ತು.

Tags

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries