HEALTH TIPS

ಮತದಾರರ ಪಟ್ಟಿಯಲ್ಲಿ ಬ್ರೆಝಿಲ್ ಮಾಡೆಲ್ ನ ಭಾವಚಿತ್ರ ಹೊಂದಿದ್ದ ಮಹಿಳೆ 2022ರಲ್ಲೇ ಮೃತ್ಯು: ವರದಿ

ನವದೆಹಲಿ: ಹರ್ಯಾಣದ ಮತದಾರರ ಪಟ್ಟಿಯಲ್ಲಿ ಬ್ರೆಝಿಲ್ ರೂಪದರ್ಶಿಯ ಭಾವಚಿತ್ರವನ್ನು 22 ಬಾರಿ ಬಳಸಲಾಗಿದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರೋಪ ಹೊಸ ತಿರುವು ಪಡೆದಿದೆ. ಮತದಾರರ ಪಟ್ಟಿಯಲ್ಲಿ ಬ್ರೆಝಿಲ್ ಮಾಡೆಲ್ ನ ಭಾವಚಿತ್ರ ಹೊಂದಿದ್ದ ಮಹಿಳೆ 2022ರಲ್ಲಿಯೇ ಮೃತಪಟ್ಟಿದ್ದಾರೆ ಎಂದು India Today ವರದಿ ಮಾಡಿದೆ.

ವರದಿ ಪ್ರಕಾರ, ವಿನೋದ್ ಎಂಬವರ ಪತ್ನಿಯಾದ ಗುನಿಯಾ 2022ರಲ್ಲಿ ನಿಧನ ಹೊಂದಿದ್ದರೂ, ಅವರ ಹೆಸರು ಇನ್ನೂ ಮತದಾರರ ಪಟ್ಟಿಯಲ್ಲಿ ಅಸ್ತಿತ್ವದಲ್ಲಿದೆ. ಅದರಲ್ಲಿ ಅವರ ಭಾವಚಿತ್ರದ ಬದಲಿಗೆ ಬ್ರೆಝಿಲ್ ರೂಪದರ್ಶಿಯೊಬ್ಬರ ಚಿತ್ರವನ್ನು ಬಳಸಲಾಗಿದೆ. ಈ ವಿಚಾರ ಗುನಿಯಾ ಅವರ ಕುಟುಂಬದವರಲ್ಲಿ ಆಘಾತ ಮೂಡಿಸಿದೆ.

"ನಮ್ಮ ಸೊಸೆ ಎರಡು ವರ್ಷಗಳ ಹಿಂದೆ ಮೃತಪಟ್ಟಿದ್ದಾಳೆ. ಆಕೆಯ ಹೆಸರು ಮತದಾರರ ಪಟ್ಟಿಯಲ್ಲಿ ಇನ್ನೂ ಇರುವುದು ಅಚ್ಚರಿ. ಆದರೆ ವಿದೇಶಿ ಮಹಿಳೆಯ ಚಿತ್ರ ಹೇಗೆ ಸೇರಿದೆ ಎಂಬುದು ನಮಗೆ ಗೊತ್ತಿಲ್ಲ," ಎಂದು ಗುನಿಯಾ ಅವರ ಅತ್ತೆ ತಿಳಿಸಿದ್ದಾರೆ. ಅವರು ತಮ್ಮ ಸೊಸೆಯ ಮರಣ ಪ್ರಮಾಣಪತ್ರವನ್ನೂ ಮಾಧ್ಯಮಗಳಿಗೆ ಪ್ರದರ್ಶಿಸಿದ್ದಾರೆ.

ಬುಧವಾರ ದಿಲ್ಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ರಾಹುಲ್ ಗಾಂಧಿ, 2024ರ ಹರ್ಯಾಣ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ "ಸೀಮಾ", "ಸ್ವೀಟಿ", "ಸರಸ್ವತಿ" ಎಂಬ ಹೆಸರುಗಳಲ್ಲಿ ಒಂದೇ ಬ್ರೆಝಿಲ್ ರೂಪದರ್ಶಿಯ ಭಾವಚಿತ್ರವನ್ನು 22 ಬಾರಿ ಬಳಕೆ ಮಾಡಲಾಗಿದೆ ಎಂದು ಚುನಾವಣಾ ಆಯೋಗದ ಕಾರ್ಯಪದ್ಧತಿಯ ಕುರಿತು ಗಂಭೀರ ಪ್ರಶ್ನೆ ಎತ್ತಿದ್ದರು.

ಈ ಪ್ರಕರಣದಿಂದ ಮತದಾರರ ಪಟ್ಟಿಯ ನಿಖರತೆ ಮತ್ತು ಚುನಾವಣಾ ಅಂಕಿ ಅಂಶಗಳ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಆರಂಭವಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries