HEALTH TIPS

ದುಬೈನಲ್ಲಿ 2026ರಲ್ಲಿ ಏರ್ ಟ್ಯಾಕ್ಸಿ ಪ್ರಾರಂಭ

ದುಬೈ: 2026ರಲ್ಲಿ ಜಗತ್ತಿನ ಪ್ರಪ್ರಥಮ ಸಮಗ್ರ ನಗರ ವೈಮಾನಿಕ ಟ್ಯಾಕ್ಸಿ ಜಾಲವನ್ನು ಪ್ರಾರಂಭಿಸುವ ತನ್ನ ಯೋಜನೆಯನ್ನು ದುಬೈ ರವಿವಾರ ದೃಢೀಕರಿಸಿದೆ. ಈ ಮಹತ್ವಾಕಾಂಕ್ಷಿ ಯೋಜನೆಯನ್ನು ನೇತೃತ್ವವನ್ನು ದುಬೈನ ರಸ್ತೆಗಳು ಆ ಹಾಗೂ ಸಾರಿಗೆ ಪ್ರಾಧಿಕಾರ (ಆರ್ಟಿಎ) ವಹಿಸಿಕೊಂಡಿದೆ.

ಅಮೆರಿಕ ಮೂಲದ ಜೊಬಿ ಏವಿಯೇಶನ್ ಕಂಪೆನಿಯ ಪಾಲುದಾರಿಕೆಯೊಂದಿಗೆ ಆರ್ಟಿಎ, ಯಶಸ್ವಿಯಾಗಿ ಯುಎಇನ ಚೊಚ್ಚಲ ಮಾನವಸಹಿತ ಇಲೆಕ್ಟ್ರಿಕ್ ವರ್ಟಿಕಲ್ ಟೇಕ್‌ಆಫ್ ಆಯಂಡ್ ಲ್ಯಾಂಡಿಂಗ್ (ಇವಿಟೊಓಎಲ್)ನ ಎರಡು ವಿಭಿನ್ನ ಕೇಂದ್ರಗಳ ನಡುವೆ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಮಾರ್ಗಮ್ನಲ್ಲಿರುವ ದುಬೈನ ಜೆಟ್ಮ್ಯಾನ್ ಹೆಲಿಪ್ಯಾಡ್ನಿಂದ ಟೇಕ್‌ಆಫ್ ಆದ ಏರ್ ಟಾಕ್ಸಿ, 17 ನಿಮಿಷಗಳ ಆನಂತರ ಅಲ್ ಮಖ್ತೂಮ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣ (ಎಡಬ್ಲ್ಯುಸಿ)ದಲ್ಲಿ ಇಳಿಯಿತು. 2025ರ ದುಬೈ ಏರ್ ಶೋ ಸಂದರ್ಭದಲ್ಲಿ ಈ ಪ್ರಾಯೋಗಿಕ ಹಾರಾಟವನ್ನು ನಡೆಸಲಾಗಿದೆ.

ನಿವಾಸಿಗಳು ಹಾಗೂ ಸಂದರ್ಶಕರು ಏರ್ ಟ್ಯಾಕ್ಸಿಗಳನ್ನು ಹತ್ತುವುದಕ್ಕೆ ನಾಲ್ಕು ಆದ್ಯತೆಯ ಸ್ಥಳಗಳನ್ನು ದುಬೈ ರಸ್ತೆ ಹಾಗೂ ಸಾರಿಗೆ ಪ್ರಾಧಿಕಾರವು ಪ್ರಕಟಿಸಿದೆ. ದುಬೈ ಅಂತಾರಾಷ್ಟ್ರೀಯ ವಿಮಾನನಿಲ್ದಾಣ, ಡೌನ್ಟೌನ್ ದುಬೈ, ದುಬೈ ಮರೀನಾ ಹಾಗೂ ಪಾಮ್ ಜುಮೈರಾಗಳಲ್ಲಿ ಏರ್ ಟ್ಯಾಕ್ಸಿ ನಿಲ್ದಾಣಗಳನ್ನು ಸ್ಥಾಪಿಸಲಾಗುವುದು. ಪ್ರಮುಖ ಸಾರಿಗೆ ಕೇಂದ್ರಗಳನ್ನು, ಪ್ರವಾಸಿ ಸ್ಥಳಗಳನ್ನು ಹಾಗೂ ಜನದಟ್ಟಣೆಯ ವಸತಿ ಪ್ರದೇಶಗಳನ್ನು ಸಂಪರ್ಕಿಸಲು ಈ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ ಎಂದು ದುಬೈ ಆರ್‌ ಟಿ ಒ ಮೂಲಗಳು ತಿಳಿಸಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries