ಮುಂಬೈ:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2026ರ ಆವೃತ್ತಿಯ ಆಟಗಾರರ ಮಿನಿ ಹರಾಜು ಡಿಸೆಂಬರ್ 14 ಮತ್ತು 17ರ ನಡುವೆ ಅಬುಧಾಬಿಯಲ್ಲಿ ನಡೆಯಲಿದೆ. ಐಪಿಎಲ್ ಆಟಗಾರರ ಹರಾಜು ಭಾರತದಿಂದ ಹೊರಗೆ ನಡೆಯುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ.
2024ರ ಹರಾಜು ದುಬೈಯಲ್ಲಿ ನಡೆದರೆ, 2025ರ ಹರಾಜು ಸೌದಿ ಅರೇಬಿಯದ ಜಿದ್ದಾದಲ್ಲಿ ನಡೆದಿತ್ತು.
ಹತ್ತು ಐಪಿಎಲ್ ತಂಡಗಳು ತಾವು ಉಳಿಸಿಕೊಳ್ಳುವ ಆಟಗಾರರ ಪಟ್ಟಿಯನ್ನು ನವೆಂಬರ್ 15ರೊಳಗೆ ಸಿದ್ಧಪಡಿಸಬೇಕಾಗಿದೆ.




