HEALTH TIPS

₹20 ಕೋಟಿ ಸಾಲ ದುರುಪಯೋಗ: ಕೇರಳ ಮಾಜಿ ಶಾಸಕ ಅನ್ವರ್ ಸ್ಥಳಗಳ ಮೇಲೆ ಇ.ಡಿ ದಾಳಿ

 ಮಲಪ್ಪುರಂ: ಕೇರಳ ಹಣಕಾಸು ನಿಗಮದ(ಕೆಎಫ್‌ಸಿ) ಸಾಲ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ(ಇಡಿ) ಅಧಿಕಾರಿಗಳು ಶುಕ್ರವಾರ ಮಲಪ್ಪುಂಂ ಜಿಲ್ಲೆಯಲ್ಲಿ ಮಾಜಿ ಶಾಸಕ ಪಿ.ವಿ. ಅನ್ವರ್ ಮತ್ತು ಇತರ ನಾಲ್ವರ ಕಚೇರಿಗಳ ಮೇಲೆ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 



ಅನ್ವರ್ (58 ವರ್ಷ), ಅವರ ಚಾಲಕ ಸಿಯಾದ್ ಮತ್ತು ಕೆಎಫ್‌ಸಿಯ ಮೂವರು ಅಧಿಕಾರಿಗಳಾದ ಅಬ್ದುಲ್ ಮನಾಫ್, ಟಿ.ಮಿನಿ ಮತ್ತು ಮುನೀರ್ ಅಹಮದ್ ವಿರುದ್ಧ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಇ.ಡಿ ಪ್ರಕರಣ ದಾಖಲಿಸಿದೆ. ಕೇರಳದ ವಿಚಕ್ಷಣಾ ಮತ್ತು ಭ್ರಷ್ಟಾಚಾರ ನಿಗ್ರಹ ದಳವು(ವಿಎಸಿಬಿ) ಇತ್ತೀಚೆಗೆ ಕೆಎಫ್‌ಸಿ ಮಲಪ್ಪುರಂ ಕಚೇರಿಯಲ್ಲಿ ಸಾಲ ದುರುಪಯೋಗಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಪ್ರಕರಣ ದಾಖಲಿಸಿತ್ತು. ಅದರ ಆಧಾರದ ಮೇಲೆ ಇ.ಡಿ ಸಂಸ್ಥೆ ತನಿಖೆ ಆರಂಭಿಸಿದೆ.

2015ರಲ್ಲಿ, ಕೆಎಫ್‌ಸಿ ಮಲಪ್ಪುರಂ ಸಂಸ್ಥೆಯು ಅನ್ವರ್ ಅವರ ಚಾಲಕ ಸಿಯಾದ್ ಅವರಿಗೆ ಉದ್ಯಮ ಉದ್ದೇಶಗಳಿಗಾಗಿ ಮೇಲಾಧಾರವನ್ನು ಸರಿಯಾಗಿ ಪರಿಶೀಲಿಸದೇ ₹7.5 ಕೋಟಿ ಸಾಲವನ್ನು ಮಂಜೂರು ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಂತರ, ಅನ್ವರ್ ಅವರ ಸಂಸ್ಥೆಯಾದ ಪಿವಿಆರ್ ಡೆವಲಪರ್ಸ್‌ಗೆ ₹3.05 ಕೋಟಿ ಮತ್ತು ₹1.56 ಕೋಟಿ ಹೆಚ್ಚುವರಿ ಸಾಲಗಳನ್ನು ಹಿಂದಿನ ದಾಖಲೆಗಳ ಆಧಾರದಲ್ಲೇ ನೀಡಲಾಗಿದೆ. ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಸಾಲ ದುರುಪಯೋಗದಿಂದಾಗಿ ಕೆಎಫ್‌ಸಿ ಒಟ್ಟು ₹22.30 ಕೋಟಿ ನಷ್ಟವಾಗಿದೆ ಎಂದು ಆರೋಪಿಸಲಾಗಿದೆ.

ಎಡವಣ್ಣದಲ್ಲಿರುವ ಅನ್ವರ್ ನಿವಾಸ ಮತ್ತು ಅಮ್ಯೂಸ್‌ಮೆಂಟ್ ಪಾರ್ಕ್ ಸೇರಿದಂತೆ ಅವರ ಉದ್ಯಮ ಸಂಸ್ಥೆಗಳಲ್ಲಿ ಮೇಲೆ ಬೆಳಿಗ್ಗೆ 7 ಗಂಟೆ ಸುಮಾರಿಗೆ ಇ.ಡಿ ಶೋಧ ಆರಂಭಿಸಿತು. ಸಿಯಾದ್ ಮತ್ತು ಕೆಎಫ್‌ಸಿ ಅಧಿಕಾರಿಗಳ ನಿವಾಸಗಳಲ್ಲೂ ಏಕಕಾಲದಲ್ಲಿ ಶೋಧ ನಡೆಸಲಾಯಿತು ಎಂದು ಅಧಿಕಾರಿ ತಿಳಿಸಿದ್ದಾರೆ.

ಕಳೆದ ತಿಂಗಳು, ಈ ಪ್ರಕರಣದ ದೂರುದಾರ ಮುರುಗೇಶ್ ನರೇಂದ್ರನ್ ಅವರಿಂದ ಇ.ಡಿ ಹೇಳಿಕೆಯನ್ನು ದಾಖಲಿಸಿಕೊಂಡಿತ್ತು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries