HEALTH TIPS

ಹೈದರಾಬಾದ್‌ ವಿಮಾನ ನಿಲ್ದಾಣ: ₹26 ಲಕ್ಷ ಮೌಲ್ಯದ 22 ಡ್ರೋನ್‌ಗಳು ವಶಕ್ಕೆ

ಹೈದರಾಬಾದ್‌: ಇಲ್ಲಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹26.7 ಲಕ್ಷ ಮೌಲ್ಯದ 22 ಅತ್ಯಾಧುನಿಕ ಡ್ರೋನ್‌ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯು (ಸಿಐಎಸ್‌ಎಫ್‌) ತಿಳಿಸಿದೆ.

ಸಿಐಎಸ್‌ಎಫ್‌ನ ಅಪರಾಧ ಮತ್ತು ಗುಪ್ತಚರ ವಿಭಾಗವು, ಸಿಂಗಪುರದಿಂದ ಬಂದ ಪ್ರಯಾಣಿಕರೊಬ್ಬರು ಎರಡು ಬ್ಯಾಗ್‌ಗಳನ್ನು ಅನುಮಾನಾಸ್ಪದ ರೀತಿಯಲ್ಲಿ ಬದಲಾಯಿಸಿಕೊಳ್ಳುತ್ತಿದ್ದುದನ್ನು ನೋಡಿ ಪರಿಶೀಲನೆ ನಡೆಸಿತು.

ಈ ವೇಳೆ ಡ್ರೋನ್‌ಗಳು ಪತ್ತೆಯಾಗಿವೆ ಎಂದು ಅದು 'ಎಕ್ಸ್‌'ನಲ್ಲಿ ಮಂಗಳವಾರ ತಿಳಿಸಿದೆ.

ವಶಕ್ಕೆ ಪಡೆಯಲಾದ ಡ್ರೋನ್‌ಗಳನ್ನು ಕಸ್ಟಮ್ಸ್‌ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries