HEALTH TIPS

ದೆಹಲಿ; ಕಾಣೆಯಾಗಿದ್ದ 75 ಮಂದಿಯನ್ನು ಕುಟುಂಬದ ಜೊತೆ ಸೇರಿಸಿದ ಪೊಲೀಸರು

ನವದೆಹಲಿ: 'ಆಪರೇಷನ್ ಮಿಲಾಪ್' ಎಂಬ ವಿಶೇಷ ಕಾರ್ಯಾಚರಣೆಯಡಿಯಲ್ಲಿ ಕಾಣೆಯಾದ ಅಥವಾ ಅಪಹರಿಸಲ್ಪಟ್ಟ 28 ಮಕ್ಕಳು ಸೇರಿದಂತೆ 75 ಮಂದಿ ಕಾಣೆಯಾದವರನ್ನು ಪತ್ತೆಹಚ್ಚಿ ಮತ್ತೆ ಅವರ ಕುಟುಂಬದ ಜೊತೆ ಸೇರಿಸುವಲ್ಲಿ ದೆಹಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

ಅಕ್ಟೋಬರ್ 1 ರಿಂದ ಅಕ್ಟೋಬರ್ 31ರ ನಡುವೆ ವಿವಿಧ ಭಾಗಗಳಿಂದ ಕಾಣೆಯಾದ ವರದಿಯಾದ 28 ಮಕ್ಕಳು ಮತ್ತು 47 ವಯಸ್ಕರು ಪತ್ತೆಯಾದವರಲ್ಲಿ ಸೇರಿದ್ದಾರೆ ಎಂದು ಅವರು ಹೇಳಿದ್ದಾರೆ.

ಕಾಣೆಯಾದ ಮತ್ತು ಅಪಹರಿಸಲ್ಪಟ್ಟ ವ್ಯಕ್ತಿಗಳ ವರದಿಗಳ ಮೇರೆಗೆ ತ್ವರಿತವಾಗಿ ಕಾರ್ಯನಿರ್ವಹಿಸಿದ ಸ್ಥಳೀಯ ಪೊಲೀಸರು, ವ್ಯಾಪಕ ಮತ್ತು ಸಂಘಟಿತ ಶೋಧ ಕಾರ್ಯಾಚರಣೆಗಳನ್ನು ಪ್ರಾರಂಭಿಸಿದರು ಎಂದು ಅವರು ಹೇಳಿದ್ದಾರೆ.

'ಶೋಧ ಕಾರ್ಯಾಚರಣೆಯ ತಂಡಗಳು ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ, ಬಸ್ ನಿಲ್ದಾಣಗಳು, ರೈಲ್ವೆ ನಿಲ್ದಾಣಗಳು, ಆಟೊ ಮತ್ತು ಇ-ರಿಕ್ಷಾ ನಿಲ್ದಾಣಗಳಲ್ಲಿ ಕಾಣೆಯಾದ ವ್ಯಕ್ತಿಗಳ ಛಾಯಾಚಿತ್ರಗಳನ್ನು ಹಂಚಿ, ಮನೆ-ಮನೆಗೆ ತೆರಳಿ ವಿಚಾರಣೆ ನಡೆಸಿದ್ದರು. ಕಾಣೆಯಾದ ವ್ಯಕ್ತಿಗಳ ಚಲನವಲನಗಳ ಬಗ್ಗೆ ಚಾಲಕರು, ಕಂಡಕ್ಟರ್‌ಗಳು ಮತ್ತು ಸ್ಥಳೀಯ ವ್ಯಾಪಾರಿಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಸ್ಥಳೀಯ ಮಾಹಿತಿದಾರರನ್ನು ಸಹ ತೊಡಗಿಸಿಕೊಂಡಿದ್ದರು. ಹತ್ತಿರದ ಪೊಲೀಸ್ ಠಾಣೆಗಳು ಮತ್ತು ಆಸ್ಪತ್ರೆಗಳ ದಾಖಲೆಗಳನ್ನು ಪರಿಶೀಲಿಸಲಾಯಿತು'ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯಲ್ಲಿ ವರ್ಷವಿಡೀ ನಡೆದ ಈ ಕಾರ್ಯಾಚರಣೆ ಉತ್ತಮ ಫಲಿತಾಂಶ ನೀಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಜನವರಿ 1ರಿಂದ ಅಕ್ಟೋಬರ್ 31ರವರೆಗೆ, 366 ಮಕ್ಕಳು ಮತ್ತು 748 ವಯಸ್ಕರು ಸೇರಿದಂತೆ ಒಟ್ಟು 1,114 ಮಂದಿ ಕಾಣೆಯಾದವರನ್ನು ಪತ್ತೆಹಚ್ಚಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries