ಬದಿಯಡ್ಕ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಪದ್ಮಭೂಷಣ ಡಾ. ಡಿ.ವೀರೇಂದ್ರ ಹೆಗ್ಗಡೆ ಅವರ ಜನ್ಮದಿನದ ಪ್ರಯುಕ್ತ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆ ಆಶ್ರಯದಲ್ಲಿ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಮಂಗಳವಾರ ಆಚರಿಸಲಾಯಿತು. ಬೆಳಗ್ಗೆ ಭಜನಾ ಕಾರ್ಯಕ್ರಮ ಜರಗಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಆಶ್ರಯ ಆಶ್ರಮದ ಗ್ರಂಥಾಲಯಕ್ಕೆ ಪೂಜ್ಯರ ಹೆಸರಿನಲ್ಲಿ ತಾಲೂಕು ಜನಜಾಗೃತಿ ವೇದಿಕೆಯಿಂದ ಕೊಡಮಾಡಿದ ಪುಸ್ತಕವನ್ನು ಹಿರಿಯ ಸಾಹಿತಿ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಅವರು ಆಶ್ರಮದ ರಮೇಶ್ ಕಳೇರಿ ಅವರಿಗೆ ಹಸ್ತಾಂತರಿಸಿದರು. ಕಾಸರಗೋಡು ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗುಮುಗಂ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಜನಜಾಗೃತಿ ವೇದಿಕೆ ಕಾರಡ್ಕ ವಲಯ ಅಧ್ಯಕ್ಷ, ಹಿರಿಯ ಧಾರ್ಮಿಕ ಮುಂದಾಳು ಸಂಜೀವ ಶೆಟ್ಟಿ ಮೊಟ್ಟೆಕುಂಜ, ಧ.ಗ್ರಾ ಜಿಲ್ಲಾ ಯೋಜನಾಧಿಕಾರಿ ದಿನೇಶ್, ಹಿರಿಯ ಯಕ್ಷಗಾನ ಕಲಾವಿದ ಚನಿಯಪ್ಪ ನಾಯ್ಕ, ಪ್ರೊ.ಎ. ಶ್ರೀನಾಥ್, ವಿದ್ಯಾಗಿರಿ ಒಕ್ಕೂಟದ ಅಧ್ಯಕ್ಷ ತಾರನಾಥ ರೈ, ಬದಿಯಡ್ಕ ಕಾರ್ಯಕ್ಷೇತ್ರದ ಅಧ್ಯಕ್ಷೆ ಅಶ್ವಿನಿ, ಆಶ್ರಯ ಆಶ್ರಮದ ಸೇವಾಕರ್ತರಾದ ಹರೀಶ್, ಭಾರತೀ, ಜಯರಾಮ, ಸೇವಾ ಪ್ರತಿನಿಧಿಗಳಾದ ಪ್ರಪುಲ್ಲ, ಸುನಿತಾ, ಜಲಜಾಕ್ಷಿ, ಬೇಬಿ, ನಳಿನಾಕ್ಷಿ, ಜ್ಯೋತಿ, ಅನಿತಾ ಮುಂತಾದವರು ಉಪಸ್ಥಿತರಿದ್ದರು. ಕನ್ನೆಪ್ಪಾಡಿ ಒಕ್ಕೂಟದ ಅಧ್ಯಕ್ಷೆ ಶಶಿಕಲಾ ಸ್ವಾಗತಿಸಿ, ಮೇಲ್ವಿಚಾರಕಿ ಸುಗುಣ ವಂದಿಸಿದರು.
ಜನಪದ ಕಲಾವಿದ ವಸಂತ ಬಾರಡ್ಕ ಆಶ್ರಮ ನಿವಾಸಿಗಳನ್ನು ಮನರಂಜಿಸಿದರು. ಆಶ್ರಮದ ನಿವಾಸಿಯಾದ ಸುಧಾ ಅವರು ಕೈಯಿಂದ ಮಾಡಿದ ವಿಶೇಷ ಶುಭಾಶಯ ಪತ್ರವನ್ನು ಯೋಜನಾಧಿಕಾರಿ ದಿನೇಶ್ ಅವರಿಗೆ ಹಸ್ತಾಂತರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಪೂಜ್ಯರ ಹೆಸರಿನಲ್ಲಿ 78ನೇ ಹುಟ್ಟುಹಬ್ಬದ ಆಚರಣೆಯ ನೆನಪಿಗೋಸ್ಕರ ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಅಖಿಲೇಶ್ ನಗಮುಗಂ ಕಲ್ಪವೃಕ್ಷವನ್ನು ಆಶ್ರಮ ವಠಾರದಲ್ಲಿ ನೆಟ್ಟರು. ಗೋವುಗಳಿಗೆ ಗೋಗ್ರಾಸ ಮತ್ತು ಆಶ್ರಮ ನಿವಾಸಿಗಳಿಗೆ ಅನ್ನದಾನ ಸೇವೆಯನ್ನು ನೀಡಲಾಯಿತು. ಭಜನಾ ಸೇವೆಯನ್ನು ನಡೆಸಿಕೊಟ್ಟ ಭಜನಾರ್ಥಿಗಳಿಗೆ ಆಶ್ರಮದ ವತಿಯಿಂದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು.




.jpg)
