ವಾಟ್ಸಾಪ್ ಒಂದು ಹೊಸ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಆಧಾರಿತ ಬರವಣಿಗೆಯ ಅಸಿಸ್ಟಂಟ್ ಫೀಚರ್ ಪರಿಚಯಿಸಿದೆ. ಹೊಸ ಟೂಲ್ ಮುಖ್ಯ ಉದ್ದೇಶವೆಂದರೆ ಬಳಕೆದಾರರು ಬರೆಯುವ ಸಂದೇಶಗಳಿಗೆ ಸರಿಯಾದ ‘ಶೈಲಿ’ ಅಥವಾ ‘ಟೋನ್’ ಸಹಾಯ ಮಾಡುವುದು. ನೀವು ಯಾವುದೇ ಮೆಸೇಜ್ಗಳನ್ನು ಟೈಪ್ ಮಾಡಿ ಈ AI ಅದನ್ನು ಪರಿಶೀಲಿಸಬಹುದು. ಇದು ನಿಮ್ಮ ಭಾವನೆಗೆ ತಕ್ಕಂತೆ ಸಂದೇಶವನ್ನು ಸುಧಾರಿಸಲು ಸಲಹೆಗಳು ನೀಡಲಾಗಿದೆ. ಇದರಿಂದ ನಿಮ್ಮ ಮೆಸೇಜ್ ಹೆಚ್ಚು ಔಪಚಾರಿಕ, ಸ್ನೇಹಪರ, ತುರ್ತು ಅಥವಾ ಸಹಾನುಭೂತಿ ರೀತಿಯಲ್ಲಿ ಇರಬೇಕಿದ್ದರೆ ಅದಕ್ಕೆ ತಕ್ಕಂತೆ ಬದಲಾವಣೆಗಳನ್ನು ಸೂಚಿಸುತ್ತದೆ.
WhatsApp AI Writing Tool ಪರಿಚಯಿಸಲು ಕಾರಣಗಳೇನು?
ಇದು ನಿಮ್ಮ ಸಂದೇಶಗಳನ್ನು ಹೆಚ್ಚು ಸ್ಪಷ್ಟಪಡಿಸಲು ಸಹಾಯ ಮಾಡುವುದರಿಂದ ಅಪಾರ್ಥ ಅಥವಾ ತಪ್ಪು ತಿಳುವಳಿಕೆಗಳನ್ನು ಕಡಿಮೆ ಮಾಡುತ್ತದೆ. ಪ್ರಸ್ತುತ ಈ ಫೀಚರ್ ಕೇವಲ ಬೀಟಾ ಬಳಕೆದಾರರಿಗೆ ಮಾತ್ರ ಲಭ್ಯವಿದ್ದು ಶೀಘ್ರದಲ್ಲೇ ಜನ ಸಾಮಾನ್ಯರ ಬಳಕೆಗೆ ಲಭ್ಯವಾಗಲಿದೆ. ಇಂದಿನ ದಿನಗಳಲ್ಲಿ ನಿಮಗೆ ತಿಳಿದಿರುವಂತೆ ಸಾಮಾನ್ಯವಾಗಿ ಪ್ರತಿಯೊಂದು ಮೆಸೇಜ್ ಶಾರ್ಟ್ ಪದಗಳನ್ನು ಹೊಂದಿದ್ದು ಜನ ಆ ಪದದ ಅಸಲಿ ಅಕ್ಷರಗಳ ಅರಿವೇ ಇಲ್ಲದೆ ತಪ್ಪಾದ ಪದಗಳನ್ನು ಬಳಸುವುದು ರೂಢಿಯಲ್ಲಿದೆ. ಉದಾಹರಣೆಗೆ ‘ಧನ್ಯವಾದ’ ಹೇಳಲು ಜನ ಹೆಚ್ಚಾಗಿ ‘Thnx ಅಥವಾ Tnx’ ಎಂಬ ಮೆಸೇಜ್ ಮಾಡೋದು ಸಹಜವಾಗಿದೆ. ಪೂರ್ತಿಯಾಗಿ Thank You ಎಂದು ಬರೆಯುವವರು ತುಂಬ ವಿರಳ.
ಈ ಹೊಸ ವಾಟ್ಸಾಪ್ AI ಟೂಲ್ ಕೇವಲ ವ್ಯಾಕರಣ ದೋಷಗಳನ್ನು ಸರಿಪಡಿಸುವುದಿಲ್ಲ. ಬದಲಾಗಿ ಇದು ನಿಮ್ಮ ಸಂದೇಶದ ಭಾವನೆ ಅಥವಾ ಉದ್ದೇಶವನ್ನು ಅರ್ಥ ಮಾಡಿಕೊಂಡು ಕೆಲಸ ಮಾಡುತ್ತದೆ. ನೀವು ಬರೆದ ಮೆಸೇಜ್ ತುಂಬಾ ತೀಕ್ಷ್ಣವಾಗಿ AI ಅದನ್ನು ಹೆಚ್ಚು ಸೌಮ್ಯವಾಗಿ ಮತ್ತು ವಿನಯಪೂರ್ವಕವಾಗಿ ಬದಲಾಯಿಸಲು ಸಲಹೆ ನೀಡುತ್ತದೆ.
ಅದೇ ರೀತಿ ನೀವು ಬರೆದಿರುವ ಬಗ್ಗೆ ತುರ್ತು ಇಲ್ಲದಿದ್ದರೆ ಅದನ್ನು ನೇರವಾಗಿ ಮತ್ತು ಬರೆಯಲು ಸಹಾಯ ಮಾಡುತ್ತದೆ. ಈ ಫೀಚರ್ ಕೇವಲ ಪದಗಳನ್ನು ಬದಲಾಯಿಸಲು ಬದಲಿಗೆ ನಿಮ್ಮ ಮೆಸೇಜ್ ಸರಿಯಾದ ಭಾವನೆಯನ್ನು ತಲುಪುವಂತೆ ನೋಡಿಕೊಳ್ಳುತ್ತದೆ. ಇದರಿಂದ ನಿಮ್ಮ ಮಾತುಗಳು ಸರಿಯಾಗಿರುವುದಲ್ಲದೆ ನೀವು ಹೇಳಲು ಬಯಸಿದ ಅರ್ಥವನ್ನು ಸಂಪೂರ್ಣವಾಗಿ ತಲುಪಿಸುವ ಗುರಿಯನ್ನು ಹೊಂದಿದೆ.
How to use WhatsApp AI writing tool?
- ಮೊದಲಿಗೆ ನಿಮ್ಮ ಮೊಬೈಲ್ನಲ್ಲಿರುವ ವಾಟ್ಸಾಪ್ ಅಪ್ಲಿಕೇಶನ್ ಅನ್ನು ಹೊಸ ವರ್ಷನ್ಗೆ ಅಪ್ಡೇಟ್ ಮಾಡಿಕೊಳ್ಳಿ.
- ನೀವು ಯಾರಿಗೆ ಸಂದೇಶ ಕಳುಹಿಸಬೇಕು ಆ ಚಾಟ್ ವಿಂಡೋ ಓಪನ್ ಮಾಡಿ.
- ಈಗ ಇಲ್ಲಿ ನೀವು ನಿಮ್ಮ ಸಂದೇಶವನ್ನು ಎಂದಿನಂತೆ ಟೈಪ್ ಮಾಡಿ ಪೂರ್ಣಗೊಳಿಸಿ.
- ನೀವು ಟೈಪ್ ಮಾಡಿದ ನಂತರ ಮೆಸೇಜ್ ಪಕ್ಕದಲ್ಲಿ ಹೊಸದಾಗಿ ಬಂದಿರುವ AI ಐಕಾನ್ (ನಕ್ಷತ್ರ ಅಥವಾ ಬೆಳಕಿನ ಬಲ್ಬ್) ಕಾಣಿಸುತ್ತದೆ.
- ಆ ಐಕಾನ್ ಮೇಲೆ ಟ್ಯಾಪ್ ಮಾಡಿದರೆ,AI ನಿಮ್ಮ ಸಂದೇಶವನ್ನು ವಿಭಿನ್ನ ಶೈಲಿ ಅಥವಾ ಟೋನ್ಗಳಲ್ಲಿ ಬರೆಯುವ ಆಯ್ಕೆಗಳನ್ನು ತೋರಿಸುತ್ತದೆ.
- ನಿಮಗೆ ಇಷ್ಟವಾದ ಆಯ್ಕೆಯನ್ನು ಆರಿಸಿ ಮತ್ತು ಅದನ್ನು ಕಳುಹಿಸಿ ಅಷ್ಟೇ.




