ಅತ್ತ ಆರ್‌ಜೆಡಿ-ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನಕ್ಕೆ ಭಾರಿ ಹಿನ್ನೆಡೆಯಾಗಿದೆ.
ಬಿಹಾರದಲ್ಲಿ ಎನ್‌ಡಿಎ ಐತಿಹಾಸಿಕ ಗೆಲುವು ಸಾಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಮತ್ತು ನಿತೀಶ್ ಕುಮಾರ್ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಮೇಲಿನ ನಂಬಿಕೆಯ ಮುದ್ರೆ ಎಂದು ಬಿಜೆಪಿಯ ಜೆಪಿ ನಡ್ಡಾ ಹೇಳಿದ್ದಾರೆ.
ಬಿಹಾರದ ಅಭಿವೃದ್ಧಿಗೆ ಎನ್‌ಡಿಎ ಬದ್ಧವಾಗಿದೆ ಎನ್ನುವುದನ್ನು ಅನುಮೋದಿಸಿ ಜನರು ಮುದ್ರೆ ಒತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
7 ಕ್ಷೇತ್ರಗಳಲ್ಲಿ ಎನ್‌ಡಿಎಗೆ ಗೆಲುವು
7 ಕ್ಷೇತ್ರಗಳಲ್ಲಿ ಎನ್‌ಡಿಎ ಗೆಲುವು ಘೋಷಣೆಯಾಗಿದೆ. ಜೆಡಿಯುವಿನ ಮೂವರು ಅಭ್ಯರ್ಥಿಗಳು ಮತ್ತು ಬಿಜೆಪಿಯ ಇಬ್ಬರು ಗೆದ್ದಿದ್ದಾರೆ ಎಂದು ಚುನಾವಣಾ ಆಯೋಗ ಘೋಷಣೆ ಮಾಡಿದೆ. ಎನ್‌ಡಿಎ 197 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಹಾಘಟಬಂಧನ್ 32 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಮಧ್ಯಾಹ್ನ 3 ಗಂಟೆಯ ಟ್ರೆಂಡ್: ಬಿಜೆಪಿ 95, ಜೆಡಿಯು 84 ಸ್ಥಾನಗಳಲ್ಲಿ ಮುನ್ನಡೆ
ಬಿಜೆಪಿ: 95
ಜೆಡಿಯು: 84
ಆರ್‌ಜೆಡಿ: 24
ಎಲ್‌ಜೆಪಿಆರ್‌ವಿ: 20
ಎಐಎಂಐಎಂ: 6
ಎಚ್‌ಎಎಂಎಸ್: 5
ಕಾಂಗ್ರೆಸ್: 2
ಇತರೆ: 9
(ಮಾಹಿತಿ: ಚುನಾವಣಾ ಆಯೋಗ, ಮಧ್ನಾಹ್ನ 3 ಗಂಟೆ)
ಬಿಹಾರ ಚುನಾವಣೆ: ಪಕ್ಷಗಳ ಸಾಧನೆ (ಮುನ್ನಡೆ)
ಬಿಜೆಪಿ: 92
ಜೆಡಿಯು: 81
ಆರ್‌ಜೆಡಿ: 26
ಎಲ್‌ಜೆಪಿಆರ್‌ವಿ: 22
ಎಐಎಂಐಎಂ: 5
ಎಚ್‌ಎಎಂಎಸ್: 5
ಕಾಂಗ್ರೆಸ್: 4
ಇತರೆ: 10
(ಮಾಹಿತಿ: ಚುನಾವಣಾ ಆಯೋಗ, ಮಧ್ನಾಹ್ನ 2 ಗಂಟೆ)




