HEALTH TIPS

Bihar Election Results: ಮಗದ, ಮಿಥಿಲಾಂಚಲ ಸೇರಿ 6 ಪ್ರಾಂತ್ಯಗಳಲ್ಲೂ ಎನ್.ಡಿ.ಎ. ಮುಂದೆ

ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಕೊನೆಯ ಹಂತದತ್ತ ಸಾಗುತ್ತಿದ್ದು, ಬಿಜೆಪಿ, ಜೆಡಿಯು ನೇತೃತ್ವದ ಎನ್‌ಡಿಎ ಸ್ಪಷ್ಟ ಬಹುಮತದತ್ತ ದಾಪುಗಾಲಿಡುತ್ತಿದೆ.

ಬಿಹಾರದಲ್ಲಿ ಪ್ರಮುಖವಾಗಿ ಆರು ಪ್ರಾಂತ್ಯಗಳಿದ್ದು, ಎಲ್ಲೆಡೆ ಎನ್‌ಡಿಎ ಮುನ್ನಡೆ ಕಾಯ್ದುಕೊಂಡಿದೆ.

ಅಂಗ ಪ್ರದೇಶ

ಬಿಹಾರದ ಆಗ್ನೇಯ ಭಾಗದಲ್ಲಿರುವ ಅಂಗ ಪ್ರದೇಶದಲ್ಲಿ ಒಟ್ಟು 27 ಕ್ಷೇತ್ರಗಳಿದ್ದು ಇಲ್ಲಿ ಎನ್‌ಡಿಎ 23ರಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇದು ಕಳೆದ ಚುನಾವಣೆಗೆ ಹೋಲಿಸಿದಲ್ಲಿ ಹೆಚ್ಚುವರಿಯಾಗಿ 5 ಕ್ಷೇತ್ರಗಳಲ್ಲಿ ಮುನ್ನಡೆ ಪಡೆದಿದೆ.

ಆರ್‌ಜೆಡಿ ಮತ್ತು ಕಾಂಗ್ರೆಸ್‌ನ ಮಹಾಘಟಬಂಧನ ಕೇವಲ 4 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಕಳೆದ ಬಾರಿ ಇಲ್ಲಿ 8 ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು.

ಭೋಜ್‌ಪುರ

ಬಿಹಾರದ ಪಶ್ಚಿಮ ಭಾಗದಲ್ಲಿರುವ ಭೋಜ್‌ಪುರ ಪ್ರಾಂತ್ಯದಲ್ಲಿ ಒಟ್ಟು 46 ಕ್ಷೇತ್ರಗಳಿವೆ. ಇಲ್ಲಿಯೂ ಎನ್‌ಡಿಎ ಮೈತ್ರಿಕೂಟ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ. ಈ ಬಾರಿ ಇಲ್ಲಿ 33 ಕ್ಷೇತ್ರಗಳಲ್ಲಿ ಎನ್‌ಡಿಎ ಮುನ್ನಡೆ ಹೊಂದಿದೆ. ಕಳೆದ ಬಾರಿಗಿಂತ 22 ಹೆಚ್ಚುವರಿ ಕ್ಷೇತ್ರಗಳನ್ನು ಗೆಲ್ಲುವ ತವಕದಲ್ಲಿದೆ.

ಮಹಾಘಟಕಬಂಧನ್‌ 12 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆದರೆ 2020ರ ಫಲಿತಾಂಶಕ್ಕಿಂತ 22 ಸ್ಥಾನಗಳನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಮಗಧ

ಬಿಹಾರದ ದಕ್ಷಿಣ ಭಾಗದಲ್ಲಿರುವ ಮಗಧದಲ್ಲೂ ಎನ್‌ಡಿಎ ಮೈತ್ರಿಕೂಟದ ಗೆಲುವಿನ ಓಟ ಮುಂದುವರಿದಿದೆ. ಇಲ್ಲಿ ಕಳೆದ ಬಾರಿಗಿಂತ ಹೆಚ್ಚುವರಿಯಾಗಿ 18 ಕ್ಷೇತ್ರಗಳ ಮುನ್ನಡೆ ಕಾಯ್ದುಕೊಂಡಿರುವ ಎನ್‌ಡಿಎ ಒಟ್ಟು 35 ಕ್ಷೇತ್ರಗಳಲ್ಲಿ ತನ್ನ ಪ್ರಾಬಲ್ಯ ಮೆರೆಯುವ ಉತ್ಸಾಹದಲ್ಲಿದೆ. ಮತ್ತೊಂದೆಡೆ ಮಹಾಘಟಕಬಂಧನ್ ಇಲ್ಲಿ ಕೇವಲ 12ರಲ್ಲಿ ಮಾತ್ರ ಮುನ್ನಡೆ ಹೊಂದಿದೆ.

ಮಿಥಿಲಾಂಚಲ್

ಬಿಹಾರದ ಉತ್ತರದಲ್ಲಿರುವ ಮಿಥಿಲಾಂಚಲ ಅತ್ಯಂತ ದೊಡ್ಡ ಪ್ರಾಂತ್ಯ. ಇಲ್ಲಿ 50 ಕ್ಷೇತ್ರಗಳಿವೆ.

ಇಲ್ಲಿಯೂ ಎನ್‌ಡಿಎ ಮೈತ್ರಿಕೂಟ ದೊಡ್ಡ ಗೆಲುವು ದಾಖಲಿಸುವತ್ತ ಸಾಗುತ್ತಿದೆ. ಕಳೆದ ಬಾರಿಗಿಂತ ಹೆಚ್ಚುವರಿಯಾಗಿ 7 ಕ್ಷೇತ್ರಗಳನ್ನು ಗೆಲ್ಲುವ ಉತ್ಸಾಹದೊಂದಿಗೆ ಒಟ್ಟು 40 ಕ್ಷೇತ್ರಗಳ ಮುನ್ನಡೆ ಕಾಯ್ದುಕೊಂಡಿದೆ.

ಮಹಾಘಟಬಂಧನ್ ಈ ಕ್ಷೇತ್ರದಲ್ಲಿ ಕೇವಲ 10 ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸ ಹೊಂದಿದೆ.

ಸೀಮಾಂಚಲ

ಬಿಹಾರದ ಪೂರ್ವ ಭಾಗದಲ್ಲಿರುವ ಸೀಮಾಂಚಲದಲ್ಲಿ ಒಟ್ಟು 24 ಕ್ಷೇತ್ರಗಳಿವೆ.

ಇಲ್ಲಿಯೂ ಎನ್‌ಡಿಎ 19 ಕ್ಷೇತ್ರಗಳಲ್ಲಿ ತನ್ನ ಗೆಲುವು ದಾಖಲಿಸುವ ಹಾದಿಯಲ್ಲಿದೆ. ಕಳೆದ ಬಾರಿಗಿಂತ 7 ಕ್ಷೇತ್ರಗಳನ್ನು ಹೆಚ್ಚುವರಿಯಾಗಿ ಗೆದ್ದುಕೊಳ್ಳುವ ಉಮೇದಿನಲ್ಲಿದೆ.

ಮಹಾಘಟಬಂದನ್‌ ಕೇವಲ 3 ಕ್ಷೇತ್ರಗಳಲ್ಲಷ್ಟೇ ಮುನ್ನಡೆ ಹೊಂದಿದೆ.

ತಿರುತ್

ಬಿಹಾರದ ವಾಯವ್ಯ ಭಾಗದಲ್ಲಿರುವ ತಿರುತ್‌ ಪ್ರಾಂತ್ಯದಲ್ಲಿ ಒಟ್ಟು 49 ಕ್ಷೇತ್ರಗಳಿವೆ.

ಇಲ್ಲಿಯೂ ಎನ್‌ಡಿಎ 41 ಕ್ಷೇತ್ರಗಳಲ್ಲಿ ಮುನ್ನಡೆ ಹೊಂದಿದೆ. ಕಳೆದ ಬಾರಿಗಿಂತ 10 ಕ್ಷೇತ್ರಗಳ ಮುನ್ನಡೆ ಅದಕ್ಕೆ ಇಲ್ಲಿ ಲಭಿಸಿದೆ.

ಮಹಾಘಟಬಂದ್‌ ಕೇವಲ 8 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries