HEALTH TIPS

ಭೂತಾನ್ ನಲ್ಲಿ ಭಾರತ ಅನುದಾನಿತ ಜಲವಿದ್ಯುತ್ ಯೋಜನೆ ಉದ್ಘಾಟಿಸಿದ ಪ್ರಧಾನಿ ಮೋದಿ

 ಥಿಂಪು: ಭೂತಾನ್ ಗೆ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಮತ್ತು ಭೂತಾನ್ ನ ರಾಜ ಜಿಗ್ಮೆ ಖೆಸರ್ ನಂಗ್ಯೆಲ್ ವಾಂಗ್ ಚುಕ್ ಮಂಗಳವಾರ ಜಂಟಿಯಾಗಿ ಭಾರತ ಅನುದಾನಿತ ಪುನಾತ್ಸಂಗ್ ಚು -2 ಜಲವಿದ್ಯುತ್ ಯೋಜನೆಗೆ ಚಾಲನೆ ನೀಡಿದ್ದಾರೆ.

ಭಾರತ ಮತ್ತು ಭೂತಾನ್ ನ ಪ್ರಗತಿ ಮತ್ತು ಸಮೃದ್ಧಿ ನಿಕಟ ಸಂಬಂಧ ಹೊಂದಿದೆ.

ಈ ಪ್ರಗತಿಯನ್ನು ಮುನ್ನಡೆಸುವ ಮತ್ತೊಂದು ಪ್ರಮುಖ ಹೆಜ್ಜೆಯನ್ನು ಇಡಲಾಗಿದೆ ಎಂದು ಪ್ರಧಾನಿ ಮೋದಿ ಈ ಸಂದರ್ಭ ಹೇಳಿದ್ದಾರೆ. ಪುನಾಂತ್ಸಂಗ್ ಚು ನದಿಯ ಉದ್ದಕ್ಕೂ ನೆಲೆಗೊಂಡಿರುವ ಈ ಯೋಜನೆಯು 1,020 ಮೆಗಾವ್ಯಾಟ್ ಉತ್ಪಾದನೆಯ ಸಾಮರ್ಥ್ಯ ವನ್ನು ಹೊಂದಿದೆ ಮತ್ತು ಪ್ರಸ್ತುತ ಭೂತಾನ್ ನ ಅತೀ ದೊಡ್ಡ ಪೂರ್ಣ ಪ್ರಮಾಣದ ಜಲವಿದ್ಯುತ್ ಸ್ಥಾವರವಾಗಿದೆ. ಈ ದೇಶದಲ್ಲಿ ವಿದ್ಯುತ್ ಪ್ರಮುಖ ರಫ್ತು ಸರಕು ಮತ್ತು ಆದಾಯದ ಮೂಲವಾಗಿದೆ ಹಾಗೂ ಇಲ್ಲಿ ಉತ್ಪಾದನೆಯಾಗುವ ವಿದ್ಯುತ್ನ 99% ನವೀಕರಿಸಬಹುದಾದ ಮೂಲಗಳಿಂದ ಬರುತ್ತದೆ ಮತ್ತು ಬಹುತೇಕ ಭಾರತಕ್ಕೆ ರಫ್ತಾಗುತ್ತದೆ.

ಭೂತಾನ್ ನ ನಾಲ್ಕನೇ ದೊರೆ ಜಿಗ್ಮೆ ಸಿಂಗೈ ವಾಂಗ್ ಚುಕ್ ಅವರ 70ನೇ ಹುಟ್ಟುಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಎರಡು ದಿನಗಳ ಅಧಿಕೃತ ಭೇಟಿಗಾಗಿ ಮಂಗಳವಾರ ಭೂತಾನ್ ತಲುಪಿದ್ದಾರೆ.








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries