ನವದೆಹಲಿ: ಕೇರಳದಲ್ಲಿ ಎಸ್.ಐ.ಆರ್. ಪ್ರಕ್ರಿಯೆಗೆ ತಡೆ ಕೋರಿ ಮುಸ್ಲಿಂ ಲೀಗ್ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಈ ಪ್ರಕ್ರಿಯೆಗೆ ಸಂಪೂರ್ಣ ತಡೆ ಕೋರಿ ಮುಸ್ಲಿಂ ಲೀಗ್ ನಾಯಕ ಪಿ.ಕೆ. ಕುಂಞಲಿಕುಟ್ಟಿ ಸಲ್ಲಿಸಿರುವ ಅರ್ಜಿಯಲ್ಲಿ ಕಣ್ಣೂರು ಮತ್ತು ರಾಜಸ್ಥಾನದಲ್ಲಿ ಬಿಎಲ್‍ಒಗಳ ಆತ್ಮಹತ್ಯೆಗಳ ಬಗ್ಗೆಯೂ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವುದು ಮತ್ತು ಮತದಾರರ ಪಟ್ಟಿಯ (ಎಸ್.ಐ.ಆರ್.) ಆಮೂಲಾಗ್ರ ಪರಿಷ್ಕರಣೆಯು ಬಿಎಲ್‍ಒಗಳು ಸೇರಿದಂತೆ ನೌಕರರ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಿದೆ. ನೌಕರರು ಆ ಒತ್ತಡವನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅನಿವಾಸಿ ಮತದಾರರು ಪಟ್ಟಿಯಿಂದ ಹೊರಗುಳಿಯುತ್ತಾರೆ ಎಂದು ಲೀಗ್ ಅರ್ಜಿಯಲ್ಲಿ ಗಮನಸೆಳೆದಿದೆ. ಎಸ್‍ಐಆರ್ ಅಧಿಸೂಚನೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವ ಮೊದಲ ರಾಜಕೀಯ ಪಕ್ಷ ಮುಸ್ಲಿಂ ಲೀಗ್ ಎಂಬುದು ಗಮನಾರ್ಹ.




