ತೈಪೆ : ತೈವಾನ್ ಮೇಲೆ ಸಂಭಾವ್ಯ ಸೇನಾ ಹಸ್ತಕ್ಷೇಪದ ಬಗ್ಗೆ ಹೇಳಿಕೆ ನೀಡುವ ಮೂಲಕ ಜಪಾನ್ ಎಲ್ಲೆ ಮೀರಿ ವರ್ತಿಸಿದೆ ಎಂದು ಚೀನಾ ಭಾನುವಾರ ಹೇಳಿದೆ.
'ನೌಕಾಪಡೆಯ ದಿಗ್ಬಂಧನ ಸೇರಿದಂತೆ ತೈವಾನ್ ವಿರುದ್ಧದ ಚೀನಾದ ಕ್ರಮಗಳು ಜಪಾನ್ ಪ್ರತಿಕ್ರಿಯೆಗೆ ಕಾರಣವಾಗಬಹುದು ಎಂದು ಜಪಾನ್‌ನ ಪ್ರಧಾನಿ ಸನೇ ತಕೈಚಿ ಅವರು ಇತ್ತೀಚೆಗೆ ಹೇಳಿರುವುದು ಆಶ್ಚರ್ಯಕರವಾಗಿದೆ' ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
'ತೈವಾನ್ ವಿಚಾರದಲ್ಲಿ ಸೇನಾ ಹಸ್ತಕ್ಷೇಪದ ಪ್ರಯತ್ನದ ಬಗ್ಗೆ ಅವರು ಸಾರ್ವಜನಿಕವಾಗಿ ತಪ್ಪು ಸಂದೇಶವನ್ನು ನೀಡಿದ್ದಾರೆ. ಹೇಳಬಾರದ ವಿಚಾರಗಳನ್ನು ಹೇಳಿದ್ದಾರೆ ಮತ್ತು ಎಚ್ಚರಿಕೆಯ ಗಡಿಯನ್ನು ದಾಟಿದ್ದಾರೆ' ಎಂದು ಹೇಳಿದರು.
'ಜಪಾನ್ ಕ್ರಮಗಳಿಗೆ ಚೀನಾ ದೃಢವಾಗಿ ಪ್ರತಿಕ್ರಿಯಿಸುತ್ತದೆ. ಜಪಾನ್ ಸೇನಾ ಹಸ್ತಕ್ಷೇಪದ ಪ್ರಯತ್ನವನ್ನು ತಡೆಯುವ ಜವಾಬ್ದಾರಿ ಎಲ್ಲ ದೇಶಗಳಾದ್ದಾಗಿದೆ' ಎಂದು ಚೀನಾ ಹೇಳಿದೆ.




