ತಿರುವನಂತಪುರಂ: ಸ್ಥಳೀಯಾಡಳಿತ ಸಂಸ್ಥೆಗಳ ಅಧ್ಯಕ್ಷ ಸ್ಥಾನಗಳ ಮೀಸಲಾತಿ ಕುರಿತು ರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.
ಕೊಚ್ಚಿ, ತ್ರಿಶೂರ್, ಕಣ್ಣೂರು, ಕಾರ್ಪೋರೇಷನ್ ಮೇಯರ್‍ಗಳು ಮಹಿಳೆಯರಾಗಿರುತ್ತಾರೆ. ಸಾಮಾನ್ಯ ಸ್ಥಾನಗಳು ತಿರುವನಂತಪುರಂ, ಕೊಲ್ಲಂ ಮತ್ತು ಕೋಝಿಕ್ಕೋಡ್‍ನ ಕಾರ್ಪೋರೇಷನ್ ಮೇಯರ್ ಹುದ್ದೆಗಳಿಗೆ ಲಭಿಸಿದೆ.
ತಿರುವನಂತಪುರಂ, ಕೊಲ್ಲಂ, ವಯನಾಡ್, ಪತ್ತನಂತಿಟ್ಟ, ಇಡುಕ್ಕಿ, ಎರ್ನಾಕುಳಂ, ತ್ರಿಶೂರ್ ಮತ್ತು ಕೋಝಿಕ್ಕೋಡ್‍ನ ಎಂಟು ಜಿಲ್ಲಾ ಪಂಚಾಯತ್ ಅಧ್ಯಕ್ಷ ಹುದ್ದೆಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.
ಅಧಿಸೂಚನೆಯ ಪೂರ್ಣ ಪಠ್ಯವನ್ನು https://compose.kerala.gov.in/ ವೆಬ್‍ಸೈಟ್‍ನಲ್ಲಿ ಗಮನಿಸಬಹುದು.




