ಮುಜಫ್ಫರ್‌ನಗರ: ಜೈಲಿನಲ್ಲಿರುವ ಮಾಜಿ ಶಾಸಕ ಶಹನವಾಜ್ ರಾಣಾ ಅವರಿಗೆ ಮೊಬೈಲ್ ಫೋನ್ ನೀಡಿದ ಆರೋಪದ ಮೇಲೆ ಅವರ ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಅಹದ್ ರಾಣಾ ಅವರನ್ನು ಮುಜಫ್ಫರ್‌ನಗರದಲ್ಲಿ ಬುಧವಾರ ರಾತ್ರಿ ಬಂಧಿಸಲಾಯಿತು ಎಂದು ಪೊಲೀಸರು ತಿಳಿಸಿದರು.
ಜೈಲರ್ ರಾಜೇಶ್ ಕುಮಾರ್ ಅವರು ನೀಡಿದ ದೂರಿನ ಮೇರೆಗೆ ಪರಿಶೀಲನೆ ನಡೆಸಿ, ಶಹನವಾಜ್ ರಾಣಾ ಬಳಿ ಇದ್ದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದರು.




