HEALTH TIPS

ಮುರಿದುಬಿದ್ದ ಪಾಕ್-ಅಫ್ಗನ್‌ ಶಾಂತಿ ಒಪ್ಪಂದ

ಇಸ್ಲಾಮಾಬಾದ್‌: ಇಸ್ತಾಂಬುಲ್‌ನಲ್ಲಿ ನಡೆಯುತ್ತಿದ್ದ ಪಾಕಿಸ್ತಾನ-ಅಫ್ಗಾನಿಸ್ತಾನ ನಡುವಣ ಶಾಂತಿ ಒಪ್ಪಂದ ಮಾತುಕತೆಯು ಮುರಿದುಬಿದ್ದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದರು.

ಒಪ್ಪಂದದ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಎರಡೂ ದೇಶಗಳು ಪರಸ್ಪರ ಆರೋಪಿಸಿದ ಕಾರಣ ಮಾತುಕತೆ ಅರ್ಧಕ್ಕೇ ಮೊಟಕುಗೊಂಡಿದೆ.

ಇದು ಉಭಯ ದೇಶಗಳ ನಡುವಣ ಗಡಿ ಉದ್ವಿಗ್ನತೆಯನ್ನು ತೀವ್ರಗೊಳಿಸಿದೆ.

ಎರಡೂ ದೇಶಗಳು ಗಡಿಯಲ್ಲಿ ನಡೆಸಿದ ಸಂಘರ್ಷದಿಂದ ಹಲವು ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಅಕ್ಟೋಬರ್‌ 19ರಂದು ಕತಾರ್‌ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಕದನ ವಿರಾಮ ಘೋಷಣೆಯಾಗಿದೆ. ಶಾಶ್ವತ ಕದನ ವಿರಾಮ ಘೋಷಿಸುವ ನಿಟ್ಟಿನಲ್ಲಿ ಇಸ್ತಾಂಬುಲ್‌ನಲ್ಲಿ ಮೂರನೇ ಸುತ್ತಿನ ಮಾತುಕತೆಯನ್ನು ನಡೆಸಲಾಗುತ್ತಿತ್ತು.

'ಮಾತುಕತೆ ಮುರಿದು ಬೀಳಲು ಪಾಕಿಸ್ತಾನವೇ ಕಾರಣ. ಅದರ ಬೇಡಿಕೆಗಳು ಸೂಕ್ತವಾಗಿಲ್ಲ' ಎಂದು ಅಫ್ಗನ್ ಸರ್ಕಾರದ ವಕ್ತಾರ ಜಬಿವುಲ್ಲಾ ಮುಜಾಹೀದ್‌ ಆರೋಪಿಸಿದ್ದಾರೆ.

'ಯುದ್ಧ ನಮ್ಮ ಮೊದಲ ಆಯ್ಕೆ ಅಲ್ಲ. ಆದರೆ ಯುದ್ಧ ಆರಂಭಿಸಿದರೆ ಎದುರಿಸಲು ಸಿದ್ಧ' ಎಂದು ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries