ತಿರುವನಂತಪುರಂ: ತಿರುವಾಂಕೂರು ದೇವಸ್ವಂ ಬೋರ್ಡಿನ ಮಾಜಿ ವಿಶೇಷ ಆಯುಕ್ತ ಕೆ. ಜಯಕುಮಾರ್ ಐಎಎಸ್ ಅವರು ತಿರುವಾಂಕೂರು ದೇವಸ್ವಂ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಜಯಕುಮಾರ್ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ನಿರ್ಧಾರವನ್ನು ಸಿಪಿಎಂ ರಾಜ್ಯ ಸಮಿತಿ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಮುಖ್ಯಮಂತ್ರಿಯೊಂದಿಗೆ ಚರ್ಚೆ ನಡೆಸಿದ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ತಿರುವಾಂಕೂರು ದೇವಸ್ವಂ ಮಂಡಳಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವುದಾಗಿ ಜಯಕುಮಾರ್ ಒಪ್ಪಿಕೊಂಡಿರುವರು. ಜವಾಬ್ದಾರಿಯನ್ನು ವಹಿಸಿಕೊಳ್ಳುವಲ್ಲಿ ಅವರಿಗೆ ಯಾವುದೇ ತೊಂದರೆ ಇಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.
ಈಗ ಉದ್ಭವಿಸಿರುವ ವಿವಾದಗಳು ಪುನರಾವರ್ತನೆಯಾಗದಂತೆ ಎಚ್ಚರ ವಹಿಸಲಾಗುವುದು. ಶಬರಿಮಲೆ ಉತ್ಸವ ಋತು ಆರಂಭವಾಗಲಿದ್ದು, ಯಾತ್ರೆಗೆ ತುರ್ತು ಪರಿಗಣನೆ ನೀಡಲಾಗುವುದು ಎಂದಿರುವರು. ಜವಾಬ್ದಾರಿ ತುಂಬಾ ದೊಡ್ಡದಾಗಿದ್ದರೂ, ಅದನ್ನು ಸಂತೋಷದಿಂದ ತೆಗೆದುಕೊಳ್ಳುವುದಾಗಿ ಮತ್ತು ಅಧಿಕೃತ ಆದೇಶವನ್ನು ಅವರು ಇನ್ನೂ ಸ್ವೀಕರಿಸಿಲ್ಲ ಎಂದು ಜಯಕುಮಾರ್ ಅವರು ಹೇಳಿರುವರು.




