HEALTH TIPS

ನಿಲ್ಲದ ಲಾಲೂ ಕುಟುಂಬ ಕದನ: ಸಹೋದರ ತೇಜಸ್ವಿಯಿಂದ ದೌರ್ಜನ್ಯ; ರೋಹಿಣಿ ಆರೋಪ

 ಪಟ್ನಾ: ಹಣ ಮತ್ತು ಪಕ್ಷದ ಟಿಕೆಟ್‌ಗಾಗಿ ತಾನು ತನ್ನ ತಂದೆಗೆ ಹಾಳಾಗಿರುವ ಮೂತ್ರಪಿಂಡವನ್ನು ದಾನ ಮಾಡಿದ್ದೇನೆ ಎಂದು ಸಹೋದರ ತೇಜಸ್ವಿಯಾದವ್‌ ಅವರ ಆಪ್ತರು ಆರೋಪಿಸಿದ್ದಾರೆ ಎಂದು ಆರ್‌ಜೆಡಿ ಅಧ್ಯಕ್ಷ ಲಾಲೂ ಪ್ರಸಾದ್‌ ಅವರ ಪುತ್ರಿ ರೋಹಿಣಿ ಆಚಾರ್ಯ ಅವರು ಭಾನುವಾರ ಹೇಳಿದ್ದಾರೆ.

ರಾಜಕೀಯ ಮತ್ತು ಕುಟುಂಬವನ್ನು ತ್ಯಜಿಸುವುದಾಗಿ ಶನಿವಾರ ಘೋಷಿಸಿರುವ ಲಾಲೂ ಕಿರಿಯ ಪುತ್ರಿ ರೋಹಿಣಿ ಅವರು, ಈ ಬೆನ್ನಲ್ಲೇ ಸಾಮಾಜಿಕ ಜಾಲತಾಣದ ಮೂಲಕ ಹಲವು ಆರೋಪಗಳನ್ನು ಮಾಡಿದ್ದಾರೆ.


'ತೇಜಸ್ವಿ ಮತ್ತು ಅವರ ಆಪ್ತರಾದ ರಾಜ್ಯಸಭಾ ಸದಸ್ಯ ಸಂಜಯ್‌ ಯಾದವ್‌ ಮತ್ತು ರಮೀಜ್‌ ಅವರು ನನ್ನನ್ನು ಮನೆಯಿಂದ ಹೊರಗೆ ಹಾಕಿದ್ದಾರೆ. ನಿನ್ನೆ ನನ್ನ ಮೇಲೆ ದೌರ್ಜನ್ಯ ಎಸಗಿದ್ದಾರೆ' ಎಂದು ಆರೋಪಿಸಿದ್ದಾರೆ.

'ವಿವಾಹಿತ ಮಹಿಳೆಯು ತನ್ನ ಪೋಷಕರನ್ನು ಉಳಿಸಲು ಏನನ್ನೂ ಮಾಡಬಾರದು. ಒಂದು ವೇಳೆ ಸಹೋದರರಿದ್ದರೆ ಅವರ ಅಥವಾ ಅವರ ಸ್ನೇಹಿತರ ಮೂತ್ರಪಿಂಡವನ್ನು ದಾನ ಮಾಡುವಂತೆ ಹೇಳಬೇಕು. ನನ್ನ ಪತಿ ಮತ್ತು ಅತ್ತೆಯ ಅನುಮತಿ ಪಡೆಯದೇ, ಮೂವರು ಮಕ್ಕಳ ಬಗ್ಗೆ ಯೋಚಿಸದೇ ನನ್ನ ಮೂತ್ರಪಿಂಡವನ್ನು ದಾನ ಮಾಡುವ ಮೂಲಕ ನಾನು ಪಾಪ ಮಾಡಿದ್ದೇನೆ. ಯಾವ ಮಗಳಿಗೂ ಇಂಥ ಗತಿ ಬರದಿರಲಿ' ಎಂದು ರೋಹಿಣಿ ಹೇಳಿದರು.

ಲಾಲೂ ಅವರು ಮೂತ್ರಪಿಂಡದ ಸಮಸ್ಯೆಯಿಂದಾಗಿ ಬಳಲುತ್ತಿದ್ದಾಗ ರೋಹಿಣಿ ಅವರು ಮೂತ್ರಪಿಂಡವನ್ನು ದಾನ ಮಾಡಿದ್ದರು.

'ವಿವಾಹಿತ ಮಹಿಳೆ ಮತ್ತು ಒಬ್ಬಳು ತಾಯಿ ಎನ್ನುವುದನ್ನೂ ಪರಿಗಣಿಸದೇ ದೌರ್ಜನ್ಯ ಎಸಗಲಾಯಿತು ಮತ್ತು ನನ್ನ ಮೇಲೆ ಎಸೆಯಲು ಚಪ್ಪಲಿಯನ್ನು ಕೈಗೆತ್ತಿಕೊಂಡಿದ್ದರು. ಆದ್ದರಿಂದ ನಾನು ನನ್ನ ತಾಯಿ ಮತ್ತು ಸಹೋದರಿಯರನ್ನು ತೊರೆದು ಮನೆಯಿಂದ ಹೊರಬರಬೇಕಾಯಿತು' ಎಂದು ಆರೋಪಿಸಿದರು.

'ನಾನು ಅನಾಥಳಾಗಿದ್ದೇನೆ. ಯಾವ ಮನೆಯಲ್ಲೂ ರೋಹಿಣಿಯಂತಹ ಹಣೆಬರಹ ಹೊಂದಿರುವ ಮಗಳು ಅಥವಾ ಸಹೋದರಿ ಜನಿಸದಿರಲಿ ಎಂದು ಬಯಸುತ್ತೇನೆ' ಎಂದು ಬೇಸರ ವ್ಯಕ್ತಪಡಿಸಿದರು.

ಬಿಹಾರ ಚುನಾವಣೆಯಲ್ಲಿ ಪಕ್ಷದ ಹೀನಾಯ ಸೋಲಿಗೆ ಯಾರದರೂ ಹೊಣೆ ಹೊತ್ತುಕೊಳ್ಳಬೇಕು ಎಂದು ರೋಹಿಣಿ ಸೂಚಿಸಿರುವುದೇ ಕುಟುಂಬದೊಳಗಿನ ಕದನಕ್ಕೆ ಕಾರಣ ಎಂದು ರೋಹಿಣಿ ಅವರು ಶನಿವಾರ ಸುಳಿವು ನೀಡಿದ್ದರು.

ಸಂಜಯ್‌ ಮತ್ತು ರಮೀಜ್‌ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದ ರೋಹಿಣಿ. ಚಾಣಕ್ಯನಂತೆ ಕಾರ್ಯತಂತ್ರ ರೂಪಿಸುತ್ತೇವೆ ಎಂದವರು ತಳಮಟ್ಟದ ಕಾರ್ಯಕರ್ತರ ಅಭಿಪ್ರಾಯವನ್ನು ಪರಗಣಿಸಲಿಲ್ಲ ಎಂದು ಆರೋಪಿಸಿದರು.

ರಮೀಜ್‌ ವಿರುದ್ಧ ಪೋಸ್ಟ್ ಹಾಕಿರುವ ರೋಹಿಣಿ, 'ರಮೀಜ್‌ ಕ್ರಿಮಿನಲ್ ಬುದ್ಧಿಯ ಗ್ಯಾಂಗ್‌ಸ್ಟರ್‌, ಸಂಜಯ್‌ ಯಾದವ್‌ ಪರ ಕೆಲಸ ಮಾಡುವ ಕೊಲೆ ಆರೋಪಿ' ಎಂದು ಟೀಕಿಸಿದ್ದಾರೆ. 







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries