HEALTH TIPS

ಸಹೋದರತೆ ಭಾರತದ ಸಂಪ್ರದಾಯದಲ್ಲಿ ಬೇರೂರಿದೆ, ಕಲಹ ನಮ್ಮ ಸ್ವಭಾವವಲ್ಲ: ಭಾಗವತ್

ಮುಂಬೈ: ಸಂಘರ್ಷದಲ್ಲಿ ತೊಡಗಿಕೊಳ್ಳುವುದು ಭಾರತೀಯರ ಸ್ವಭಾವವಲ್ಲ. ಸಹೋದರತೆ ಮತ್ತು ಸಾಮರಸ್ಯವು ದೇಶದ ಸಂಪ್ರದಾಯದಲ್ಲಿ ಬೇರೂರಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್‌ ಭಾಗವತ್ ಶನಿವಾರ ಹೇಳಿದ್ದಾರೆ.

ನಾಗಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅವರು, 'ನಾವು ಯಾರೊಂದಿಗೂ ವಾಗ್ವಾದ ನಡೆಸುವುದಿಲ್ಲ.

ವಿವಾದಗಳಿಂದ ದೂರ ಉಳಿಯುತ್ತೇವೆ. ವಿವಾದಗಳಲ್ಲಿ ತೊಡಗುವುದು ನಮ್ಮ ಸ್ವಭಾವವಲ್ಲ. ಒಟ್ಟಿಗೆ ಬಾಳುವುದು, ಸಹೋದರತ್ವವನ್ನು ಪೋಷಿಸುವುದು ನಮ್ಮ ಸಂಪ್ರದಾಯವಾಗಿದೆ' ಎಂದು ಒತ್ತಿ ಹೇಳಿದ್ದಾರೆ.

ರಾಷ್ಟ್ರೀಯತೆ ಕುರಿತಾದ ಭಾರತದ ಪರಿಕಲ್ಪನೆಯು ಪಾಶ್ಚಾತ್ಯ ವಾಖ್ಯಾನಗಳಿಗಿಂತ ವಿಭಿನ್ನವಾಗಿದೆ ಎಂದು ಪ್ರತಿಪಾದಿಸಿರುವ ಭಾಗವತ್‌, 'ಒಮ್ಮೆ ಒಂದು ಅಭಿಪ್ರಾಯ ರೂಪುಗೊಂಡ ನಂತರ, ಅದರ ಹೊರತಾದ ಆಲೋಚನೆಗಳನ್ನು ಅವರು ಒಪ್ಪುವುದಿಲ್ಲ. ಇತರ ಆಲೋಚನೆಗಳನ್ನು ಅವರು 'ಇಸಂ'ಗಳೆಂದು ಪರಿಗಣಿಸುತ್ತಾರೆ' ಎಂದಿದ್ದಾರೆ.

'ಅವರು ನಮ್ಮ ರಾಷ್ಟ್ರೀಯತೆಯ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲಾರರು. ಹಾಗಾಗಿಯೇ ಅದನ್ನು ರಾಷ್ಟ್ರೀಯವಾದ ಎನ್ನುತ್ತಾರೆ. 'ರಾಷ್ಟ್ರ'ದ ಕುರಿತು ನಾವು ಹೊಂದಿರುವ ಚಿಂತನೆಯು ಪಾಶ್ಚಾತ್ಯರ ನಿಲುವಿಗಿಂತ ವಿಭಿನ್ನಾವಾಗಿದೆ. ನಾವು ಹೊಂದಿರುವ 'ರಾಷ್ಟ್ರ'ದ ಪರಿಕಲ್ಪನೆಯು ಪುರಾತನ ಕಾಲದಿಂದಲೂ ಅಸ್ತಿತ್ವದಲ್ಲಿದೆ' ಎಂದಿದ್ದಾರೆ.

ಮುಂದುವರಿದು, 'ನಾವು ರಾಷ್ಟ್ರೀಯತೆ ಪದ ಬಳಸುತ್ತೇವೆಯೇ ಹೊರತು, ರಾಷ್ಟ್ರೀಯವಾದ ಎಂಬುದನ್ನಲ್ಲ. ರಾಷ್ಟ್ರದ ಕುರಿತಾದ ಅತಿಯಾದ ಪ್ರತಿಷ್ಠೆಯು ಎರಡು ಮಹಾಯುದ್ಧಗಳಿಗೆ ನಾಂದಿಯಾಯಿತು' ಎಂದೂ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries