ತಿರುವನಂತಪುರಂ: ಎಸ್.ಐ.ಆರ್ ವಿರುದ್ಧದ ಅರ್ಜಿ ಸುಪ್ರೀಂ ಕೋರ್ಟ್‍ನಲ್ಲಿ ಬಾಕಿ ಇರುವುದರಿಂದ ಸಮೀಕ್ಷೆ ಫಾರ್ಮ್(ಎಣಿಕೆ ನಮೂನೆ) ನ್ನು ಸ್ವೀಕರಿಸಲು ಯಾವುದೇ ಆತುರವಿಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಡಾ. ರತನ್ ಯು. ಖೇಲ್ಕರ್ ಹೇಳಿದ್ದಾರೆ.
ಎಸ್.ಐ.ಆರ್ ವಿರುದ್ಧದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಿಚಾರಣೆ ನಡೆಸಲಿದೆ. ಸ್ಥಳೀಯಾಡಳಿತ ಚುನಾವಣೆಗಳ ಸಮಯದಲ್ಲಿ ಎಸ್.ಐ.ಆರ್ ನಲ್ಲಿ ಬದಲಾವಣೆ ತರುವಂತೆ ಕೋರಿ ರಾಜ್ಯ ಸರ್ಕಾರ ಮತ್ತು ರಾಜಕೀಯ ಪಕ್ಷಗಳು ಸುಪ್ರೀಂ ಕೋರ್ಟ್ ಅನ್ನು ಸಂಪರ್ಕಿಸಿವೆ.
ಜಿಲ್ಲೆಗಳಲ್ಲಿನ ಸಂದರ್ಭಗಳಿಗೆ ಅನುಗುಣವಾಗಿ ಬಿ.ಎಲ್.ಒ ನಿರ್ಧಾರ ತಳೆಯುತ್ತಾರೆ. ಪತ್ತೆಹಚ್ಚಲಾಗದ ಮತದಾರರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ ಎಂದು ತಿರುವನಂತಪುರಂನಲ್ಲಿ ಫಾರ್ಮ್ ಸಂಗ್ರಹ ಶಿಬಿರಗಳಿಗೆ ಭೇಟಿ ನೀಡಿದ ನಂತರ ಡಾ. ರತನ್ ಯು. ಖೇಲ್ಕರ್ ಹೇಳಿದರು.




