ಬದಿಯಡ್ಕ: ಕಾಸರಗೋಡು ಕೃಷಿಕರ ಮಾರುಕಟ್ಟೆ ಸಹಕಾರಿ ಸಂಘ ನೀರ್ಚಾಲು ಇದರ 2024-25 ಆರ್ಥಿಕ ವರ್ಷದ ಮಹಾಸಭೆ ನೀರ್ಚಾಲಿನಲ್ಲಿರುವ ಸಂಘದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಜರಗಿತು. ಸಂಘದ ಅಧ್ಯಕ್ಷ ಪದ್ಮರಾಜ ಪಟ್ಟಾಜೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಪ್ಪಣ್ಣ ಬಿ.ಎಸ್. ವಾರ್ಷಿಕ ವರದಿ, ಆಯವ್ಯಯ ಪಟ್ಟಿ, ಮುಂದಿನ ವರ್ಷಗಳ ಬಜೆಟ್ ಮಂಡಿಸಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಬಜೆಟ್‍ಗಿಂತ ಹೆಚ್ಚಿನ ಖರ್ಚು ವೆಚ್ಚದ ಅಂಗೀಕಾರವನ್ನು ಪಡೆದರು.
ಹಿರಿಯರಾದ ವಾಶೆ ಶ್ರೀಕೃಷ್ಣ ಭಟ್, ವಿಘ್ನೇಶ್ವರ ಭಟ್ ಗುಣಾಜೆ, ಗಣೇಶ ಪಾರೆಕಟ್ಟ, ನಾರಾಯಣ ಬಂಟ, ಕ್ಯಾಂಪ್ಕೋ ಬದಿಯಡ್ಕ ವಲಯ ಪ್ರಬಂಧಕ ಚಂದ್ರ ಹಾಗೂ ಸದಸ್ಯರು ಸಂಘದ ಅಭಿವೃದ್ಧಿಗೆ ಸಲಹೆ ಸೂಚನೆಗಳನ್ನು ನೀಡಿದರು. ನಿರ್ದೇಶಕ ಸರ್ವೇಶಕುಮಾರ್ ಭಟ್ ಸ್ವಾಗತಿಸಿ, ಉಪಾಧ್ಯಕ್ಷ ಶಿವಶಂಕರ ಭಟ್ ಗುಣಾಜೆ ವಂದಿಸಿದರು. ನಿರ್ದೇಶಕಿ ಸ್ಮಿತಾ ಸರಳಿ ಪ್ರಾರ್ಥನೆ ಹಾಡಿದರು.





