HEALTH TIPS

ಫರಿದಾಬಾದ್‌ನಲ್ಲಿ ಬಂಧಿತ ವೈದ್ಯೆಗೆ ಜೆಇಎಂನ ನಂಟು: ತನಿಖೆಯಲ್ಲಿ ದೃಢ

 ನವದೆಹಲಿ: ಅಂತರರಾಜ್ಯ ಭಯೋತ್ಪಾದಕರ ಜಾಲವನ್ನು ಭೇದಿಸಿದ ನಂತರ ಬಂಧಿಸಲಾದ ಎಂಟು ಮಂದಿಯಲ್ಲಿ ಒಬ್ಬರಾದ ವೈದ್ಯೆಗೆ ಜಮಾತ್‌-ಉಲ್‌-ಮೊಮಿನಾತ್‌ ಸಂಘಟನೆಯ ನಂಟಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ. 


ಫರಿದಾಬಾದ್‌ನ ಅಲ್‌-ಫಲಾಹ್‌ ವಿಶ್ವವಿದ್ಯಾಲಯದ ಡಾ. ಶಾಹೀನ್ ಸಯೀದ್‌ ಅವರನ್ನು ಶ್ರೀನಗರಕ್ಕೆ ಕರೆದೊಯ್ದು ಸೋಮವಾರ ಬಂಧಿಸಲಾಗಿತ್ತು.

ನಿಷೇಧಿತ ಜೈಷ್-ಎ-ಮೊಹಮ್ಮದ್‌ (ಜೆಎಂಎಂ) ಸಂಘಟನೆಯು ಕಳೆದ ತಿಂಗಳಷ್ಟೇ ಜಮಾತ್‌-ಉಲ್‌-ಮೊಮಿನಾತ್‌ ಮಹಿಳಾ ಘಟಕ ಆರಂಭಿಸಿದೆ.

ಶಾಹೀನ್‌, ಮಹಿಳಾ ಘಟಕದ ನೇಮಕಾತಿ ವಿಭಾಗದಲ್ಲಿದ್ದರು. ಭಯೋತ್ಪಾದಕ ಚಟುವಟಿಕೆಗಳಿಗೆ ಹೆಚ್ಚು ಹೆಚ್ಚು ಮಹಿಳೆಯರನ್ನು ನೇಮಿಸಿಕೊಳ್ಳಲು ಪಾಕಿಸ್ತಾನದ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

'ಮಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳ ಮೂಲಕವಷ್ಟೇ ಆಕೆಯ ಬಂಧನದ ಬಗ್ಗೆ ಗೊತ್ತಾಗಿದೆ' ಎಂದು ಶಾಹೀನ್ ತಂದೆ ಲಖನೌನಲ್ಲಿ ಪ್ರತಿಕ್ರಿಯಿಸಿದ್ದಾರೆ. 









ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries