ಮಾವಿನ ಎಲೆ ಜೀವಸತ್ವಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಮಾವಿನೆಲೆಯಲ್ಲಿರುವ ಉತ್ಕರ್ಷಣ ನಿರೋಧಕಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ರಕ್ತನಾಳಗಳನ್ನು ಬಲಪಡಿಸುತ್ತದೆ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಅಜೀರ್ಣ ಮತ್ತು ಅತಿಸಾರದಂತಹ ಸಮಸ್ಯೆಗಳಿಗೆ ಮಾವಿನೆಲೆ ಪರಿಣಾಮಕಾರಿ ಔಷಧವಾಗಿದೆ. ಆಸ್ತಮಾ ಮತ್ತು ಬ್ರಾಂಕೈಟಿಸ್‍ನಂತಹ ಉಸಿರಾಟದ ಸಮಸ್ಯೆಗಳಿಗೆ ಮಾವಿನೆಲೆ ಉತ್ತಮ ಪರಿಹಾರವಾಗಿದೆ.
ಇದರ ಉತ್ಕರ್ಷಣ ನಿರೋಧಕ ಗುಣಲಕ್ಷಣಗಳಿಂದಾಗಿ, ಇದು ಚರ್ಮದ ಆರೋಗ್ಯವನ್ನು ಸುಧಾರಿಸಲು ಮತ್ತು ಮೊಡವೆಗಳಂತಹ ಕಾಯಿಲೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮಾವಿನೆಲೆಯಲ್ಲಿರುವ ಪಾಲಿಫಿನಾಲ್‍ಗಳು ಮತ್ತು ಫ್ಲೇವನಾಯ್ಡ್‍ಗಳು ಉರಿಯೂತವನ್ನು ತಡೆಯಲು ಸಹಾಯ ಮಾಡುತ್ತದೆ. ಮಾಹಿತಿಗಳಿಗೆ ಆಯುರ್ವೇದ ವೈದ್ಯರು, ನಾಟಿ ವೈದ್ಯರ ನಿರ್ದೇಶನ ಪಡೆಯಬಹುದು.
ಆಸ್ತಮಾ ಮತ್ತು ಬ್ರಾಂಕೈಟಿಸ್‍ನಂತಹ ಉಸಿರಾಟದ ಸಮಸ್ಯೆಗಳಿಗೆ ಮಾವು ಉತ್ತಮ ಪರಿಹಾರವಾಗಿದೆ.




