ತಿರುವನಂತಪುರಂ: ಪ್ರಕ್ಷುಬ್ದ ಸಮುದ್ರದ ವಿದ್ಯಮಾನದ ಭಾಗವಾಗಿ, ತಿರುವನಂತಪುರಂ, ಕೊಲ್ಲಂ ಮತ್ತು ಕೋಯಿಕ್ಕೋಡ್ ಜಿಲ್ಲೆಗಳ ಕರಾವಳಿ ಪ್ರದೇಶಗಳಲ್ಲಿ ಎಚ್ಚರಿಕೆ ನೀಡಲಾಗಿದೆ.
ಇಂದು ರಾತ್ರಿ 11.30 ರವರೆಗೆ ತಿರುವನಂತಪುರಂ (ಕಪ್ಪಿಲ್‍ನಿಂದ ಪೆÇೀಜಿಯೂರ್‍ವರೆಗೆ), ಕೊಲ್ಲಂ (ಅಲಪ್ಪಟ್‍ನಿಂದ ಎಡವವರೆಗೆ) ಮತ್ತು ಕೋಯಿಕ್ಕೋಡ್ (ಚೊಂಬಳದಿಂದ ರಾಮನಟ್ಟುಕರವರೆಗೆ) ಜಿಲ್ಲೆಗಳ ಕರಾವಳಿಯಲ್ಲಿ 0.7 ರಿಂದ 1.0 ಮೀಟರ್ ಎತ್ತರದ ಅಲೆಗಳು ಏಳಬಹುದು.
ಅಲೆಗಳ ತೀವ್ರತೆಯಿಂದಾಗಿ ಸಮುದ್ರ ಕೊರೆತ ಸಂಭವಿಸುವ ಸಾಧ್ಯತೆ ಇರುವುದರಿಂದ ಮೀನುಗಾರರು ಮತ್ತು ಕರಾವಳಿ ನಿವಾಸಿಗಳು ಜಾಗರೂಕರಾಗಿರಬೇಕು ಎಂದು ರಾಷ್ಟ್ರೀಯ ಸಾಗರಶಾಸ್ತ್ರ ಸಂಶೋಧನಾ ಸಂಸ್ಥೆ ತಿಳಿಸಿದೆ.




