HEALTH TIPS

ಹೈದರಾಬಾದ್ ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ: ಕಾಂಗ್ರೆಸ್ ಜಯಭೇರಿ

ಹೈದರಾಬಾದ್: ತೆಲಂಗಾಣದ ಹೈದರಾಬಾದ್‌ ನಗರದ ಪ್ರತಿಷ್ಠಿತರ ಬಡಾವಣೆಗಳನ್ನು ಒಳಗೊಂಡಿರುವ ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಜಯಭೇರಿ ಬಾರಿಸಿದೆ.

ಕಾಂಗ್ರೆಸ್‌ನ ವಿ. ನವೀನ್ ಯಾದವ್ ಅವರು ಬಿಆರ್‌ಎಸ್‌ ಅಭ್ಯರ್ಥಿ ಮಂಗಂಟಿ ಸುನೀತಾ ವಿರುದ್ಧ 24 ಸಾವಿರಕ್ಕೂ ಅಧಿಕ ಮತಗಳನ್ನು ಪಡೆದು ವಿಧಾನಸಭೆ ಪ್ರವೇಶಿಸಿದರು.

ನವೀನ್ ಯಾದವ್ ಅವರು 98,988 ಮತಗಳನ್ನು ಪಡೆದರೆ, ಬಿಆರ್‌ಎಸ್‌ ಅಭ್ಯರ್ಥಿ ಮಂಗಂಟಿ ಸುನೀತಾ 74,259 ಮತಗಳನ್ನು ಪಡೆದರು.

ಬಿಜೆಪಿಯ ಲಂಕಾಲಾ ದೀಪಕ್ ರೆಡ್ಡಿ ಅವರು 17,061 ಮತಗಳನ್ನು ಪಡೆದು ಠೇವಣಿ ಕಳೆದುಕೊಂಡಿದ್ದಾರೆ.

ಬಿಆರ್‌ಎಸ್‌ನಿಂದ ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಶಾಸಕ ಮಂಗಂಟಿ ಗೋಪಿನಾಥ್ ಅವರು ಕಳೆದ ಜೂನ್‌ನಲ್ಲಿ ನಿಧನರಾಗಿದ್ದರು.

ಈ ಮೂಲಕ ಬಿಆರ್‌ಎಸ್ ತನ್ನ ಕ್ಷೇತ್ರವನ್ನು ಕಳೆದುಕೊಂಡಿದ್ದು, ಆಡಳಿತಾರೂಢ ಕಾಂಗ್ರೆಸ್‌ಗೆ ಹೊಸ ಚೈತನ್ಯ ಬಂದಂತಾಗಿದೆ.

ವಿಶೇಷ ಎಂದರೆ ಹೈದರಾಬಾದ್‌ ಜುಬಿಲಿ ಹಿಲ್ಸ್‌ ವಿಧಾನಸಭಾ ಕ್ಷೇತ್ರದಲ್ಲಿ 1 ಲಕ್ಷ ಮುಸ್ಲಿಂ ಮತದಾರರಿದ್ದು, ಇದಕ್ಕಾಗಿಯೇ ಕಾಂಗ್ರೆಸ್ ರಣತಂತ್ರ ರೂಪಿಸಿತ್ತು. ಮುಸ್ಲಿಂ ಮತದಾರರ ಮನವೊಲಿಕೆಗಾಗಿ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಅಜರುದ್ದೀನ್ ಅವರನ್ನು ಕಾಂಗ್ರೆಸ್‌ ಸರ್ಕಾರ ಸಚಿವರನ್ನಾಗಿ ಮಾಡಿದೆ ಎನ್ನಲಾಗಿದೆ.

ತೆಲಂಗಾಣ ವಿಧಾನಸಭೆಗೆ 2023 ರಲ್ಲಿ ಚುನಾವಣೆ ನಡೆದಿತ್ತು. 119 ಸ್ಥಾನಗಳನ್ನು ಹೊಂದಿರುವ ತೆಲಂಗಾಣ ವಿಧಾನಸಭೆಯಲ್ಲಿ ಜುಬಿಲಿ ಹಿಲ್ಸ್ ಸೇರಿ 76 ಸ್ಥಾನಗಳೊಂದಿಗೆ ಕಾಂಗ್ರೆಸ್ ಅಧಿಕಾರ ನಡೆಸುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries