ದೋಹ: ಗಾಝಾದಲ್ಲಿ ಎರಡು ವರ್ಷಗಳ ವಿನಾಶಕಾರಿ ಯುದ್ಧವನ್ನು ಸ್ಥಗಿತಗೊಳಿಸಿದ ಕದನ ವಿರಾಮದ ಉಲ್ಲಂಘನೆಯ ವಿರುದ್ಧ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಎಚ್ಚರಿಕೆ ನೀಡಿದ್ದಾರೆ.
ದೋಹಾದಲ್ಲಿ ನಡೆದ ಸಾಮಾಜಿಕ ಅಭಿವೃದ್ಧಿಗಾಗಿ ಎರಡನೇ ಶೃಂಗಸಭೆಯ ನೇಪಥ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು `ಗಾಝಾದಲ್ಲಿ ಕದನ ವಿರಾಮದ ನಿರಂತರ ಉಲ್ಲಂಘನೆಗಳ ಬಗ್ಗೆ ತೀವ್ರ ಕಳವಳಗೊಂಡಿದ್ದು ಎಲ್ಲಾ ಪಕ್ಷಗಳೂ ಶಾಂತಿ ಒಪ್ಪಂದದ ಪ್ರಥಮ ಹಂತದ ನಿರ್ಧಾರಗಳಿಗೆ ಬದ್ಧವಾಗಿರಬೇಕು' ಎಂದು ಆಗ್ರಹಿಸಿದ್ದಾರೆ.
ಈ ಮಧ್ಯೆ, ಸೋಮವಾರ ಇಸ್ರೇಲ್ 45 ಫೆಲೆಸ್ತೀನೀಯರ ಮೃತದೇಹಗಳನ್ನು ರೆಡ್ ಕ್ರಾಸ್ ಗೆ ಹಸ್ತಾಂತರಿಸಿರುವುದಾಗಿ ವರದಿಯಾಗಿದೆ.




