HEALTH TIPS

ಭಾರತೀಯ ಪ್ರಜೆ ಅಪಹರಿಸಿ 'ಶಾರುಕ್ ಖಾನ್' ಬಗ್ಗೆ ವಿಚಾರಿಸಿದ ಸುಡಾನ್ ಬಂಡುಕೋರರು!

ಕೈರೊ: ಭಾರತೀಯ ಪ್ರಜೆಯನ್ನು ಅಪಹರಿಸಿ ಒತ್ತೆಯಾಳುವನ್ನಾಗಿ ಇಟ್ಟುಕೊಂಡಿರುವ ಸುಡಾನ್‌ನ ಬಂಡುಕೋರರ ಪಡೆ, ಅವರ ಬಳಿ ಬಾಲಿವುಡ್ ನಟ ಶಾರುಕ್‌ ಖಾನ್‌ ಬಗ್ಗೆ ವಿಚಾರಿಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಒಡಿಶಾದ ಜಗತ್ಸಿಂಗಪುರದ ನಿವಾಸಿ ಆದರ್ಶ್‌ ಬೆಹೆರಾ(36) ಅಪಹರಣಕ್ಕೊಳಗಾದ ವ್ಯಕ್ತಿ.

ಸುಡಾನ್‌ನ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಅವರನ್ನು ಆರ್‌ಎಸ್‌ಎಫ್‌ ಬಂಡುಕೋರರು ಅಲ್ ಫಾಸಿರ್ ನಗರದಿಂದ ಅಪಹರಿಸಿದ್ದರು. ನಂತರ ಆರ್‌ಎಸ್‌ಎಫ್‌ನ ಭದ್ರಕೋಟೆಯಾದ ಮಿಲಿಟಿಯಾಗೆ ಕರೆದುಕೊಂಡು ಹೋಗಿದ್ದಾರೆ.

ವಿಡಿಯೊದಲ್ಲಿ ಆದರ್ಶ್‌ ಅವರು ಬಂಡುಕೋರರ ಮಧ್ಯೆ ಕುಳಿತಿರುವುದು ಕಾಣಬಹುದು. ಬಂದೂಕು ಹಿಡಿದುಕೊಂಡಿರುವ ಬಂಡುಕೋರನೊಬ್ಬ 'ನಿಮಗೆ ಶಾರುಕ್‌ ಖಾನ್ ಗೊತ್ತಾ?' ಎಂದು ಆದರ್ಶ್‌ ಅವರಲ್ಲಿ ಕೇಳಿದ್ದಾನೆ.

ಮತ್ತೊಬ್ಬ ಬಂಡುಕೋರ, 'ಡಗ್ಲೋ ತುಂಬಾ ಒಳ್ಳೆಯವನು' ಎಂದು ಹೇಳುವಂತೆ ಆದರ್ಶ್‌ಗೆ ಆಜ್ಞೆ ಮಾಡುವುದನ್ನೂ ಕಾಣಬಹುದಾಗಿದೆ.

ಸುಡಾನ್‌ನ ಸೇನಾ ಮುಖ್ಯಸ್ಥ ಅಬ್ಡೆಲ್ ಫತ್ತಾಹ್ ಅಲ್ ಬುರ್ಹನ್ ಮತ್ತು ಕ್ರಿಪ್ರ ಬೆಂಬಲ ಪಡೆಗಳ (ಆರ್‌ಎಸ್‌ಎಫ್‌) ಕಮಾಂಡರ್ ಮೊಹಮದ್ ಹಮ್ದಾನ್ ಡಗ್ಲೋ ನಡುವೆ 2023ರ ಏಪ್ರಿಲ್‌ನಿಂದ ಸಂಘರ್ಷ ಹುಟ್ಟುಕೊಂಡಿದ್ದು, ಇನ್ನೂ ಮುಂದುವರಿದಿದೆ. ಸಂಘರ್ಷದಲ್ಲಿ 80 ಲಕ್ಷ ಹೆಚ್ಚು ಜನರು ನೆಲೆ ಕಳೆದುಕೊಂಡಿದ್ದಾರೆ.

ಏತನ್ಮಧ್ಯೆ, ಆರ್‌ಎಸ್‌ಎಫ್‌ನಿಂದ ಆದರ್ಶ್‌ ಅವರನ್ನು ಪಾರು ಮಾಡುವಂತೆ ಅವರ ಕುಟುಂಬ ಭಾರತ ಸರ್ಕಾರವನ್ನು ಒತ್ತಾಯಿಸಿದೆ.

ಆದರ್ಶ್‌ ಅವರ ಬಿಡುಗಡೆಯನ್ನು ಖಚಿತಪಡಿಸಿಕೊಳ್ಳಲು ಸುಡಾನ್‌ ಅಧಿಕಾರಿಗಳು ಮತ್ತು ವಿದೇಶಾಂಗ ಸಚಿವಾಲಯದೊಂದಿಗೆ ಸಂಪರ್ಕದಲ್ಲಿರುವುದಾಗಿ ಭಾರತದಲ್ಲಿನ ಸುಡಾನ್ ರಾಯಭಾರಿ ಮೊಹಮ್ಮದ್ ಅಬ್ದಲ್ಲಾ ಅಲಿ ಎಲ್ಟೋಮ್ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries