ಮಂಜೇಶ್ವರ: ಕೃಷಿ ಇಲಾಖೆಯ ಅಧಿಕಾರಿಗಳು ರೈತರಿರುವಲ್ಲಿ ತೆರಳಿ ಅವರಿಗಾಗಿ ಕೆಲಸ ಮಾಡಬೇಕು ಎಂದು ಕೃಷಿ, ಅಭಿವೃದ್ಧಿ ಮತ್ತು ರೈತ ಕಲ್ಯಾಣ ಸಚಿವ ಪಿ. ಪ್ರಸಾದ್ ಹೇಳಿದರು. ಕೃಷಿ ಭವನಗಳು ಕೃಷಿ ಇಲಾಖೆಯ ಅಧಿಕಾರಿಗಳು ವಿರಾಮದ ಸಮಯದಲ್ಲಿ ವಿಶ್ರಾಂತಿ ಪಡೆಯುವ ಸ್ಥಳ ಮಾತ್ರವಾಗುತ್ತಿದೆ. ಇದು ಬದಲಾಗಬೇಕು ಎಂದು ಸಚಿವರು ಹೇಳಿದರು.
ಮೀಂಜ ಗ್ರಾಮ ಪಂಚಾಯತಿ ಕೃಷಿ ಭವನವನ್ನು ಉದ್ಘಾಟಿಸಿ ಸಚಿವರು ಮಾತನಾಡುತ್ತಿದ್ದರು.
ಕಾರ್ಯಕ್ರಮದ ಭಾಗವಾಗಿ ನಡೆದ ಕಿಸಾನ್ ಗೋಷ್ಠಿಯನ್ನು ಮೀಂಜ ಗ್ರಾಮ ಪಂಚಾಯತಿ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀಮಾ ಟೀಚರ್ ಮುಖ್ಯ ಅತಿಥಿಗಳಾಗಿದ್ದರು.
ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಹನೀಫಾ, ಮೀಂಜ ಗ್ರಾಮ ಪಂಚಾಯತಿ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಮೀಂಜ ಗ್ರಾಮ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರುಖಿಯಾ ಸಿದ್ದೀಕ್, ಬಾಬು, ಸರಸ್ವತಿ, ಜಿಲ್ಲಾ ಪಂಚಾಯತಿ ಸದಸ್ಯರಾದ ಗೋಲ್ಡನ್ ರಹಮಾನ್, ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯರಾದ ಎಂ.ಎಲ್.ಅಶ್ವಿನಿ, ಕೆ.ವಿ.ರಾಧಾಕೃಷ್ಣ, ಮಂಜೇಶ್ವರ ಕೃಷಿ ಸಹಾಯಕ ನಿರ್ದೇಶಕ ಅರುಣ್ ಪ್ರಸಾದ್, ಮೀಂಜ ಗ್ರಾಮ ಪಂಚಾಯತಿ ಸದಸ್ಯರಾದ ಮಿಸ್ರಿಯಾ ಎಂ ಕುಂಞÂ್ಞ, ನಾರಾಯಣ ತುಂಗಾ, ಜ್ಯೋತಿ ಪಿ ರೈ, ಕುಸುಮಾ ಮೋಹನ್, ಕೆ ಚಂದ್ರಶೇಖರ, ಜನಾರ್ದನ ಪೂಜಾರಿ, ಬಿ.ಎಂ.ಆಶಾಲತಾ, ರೇಖಾ ಶರತ್, ಜಿ.ವಿನೋದ್, ಎಂ.ಅಬ್ದುಲ್ ರಜಾಕ್, ಮೀಂಜ ಗ್ರಾ.ಪಂ. ಸಿಡಿಎಸ್ ಅಧ್ಯಕ್ಷೆ ಶಾಲಿನಿ ಬಿ ಶೆಟ್ಟಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ವಿ. ರಮೇಶ, ರಾಮಕೃಷ್ಣ ಕಡಂಬಾರ್, ಎಂ.ಕೆ. ಮಹಮ್ಮದ್, ಬಿ.ಎಂ. ಆದರ್ಶ, ಅಝೀಝ್ ಮರಿಕೆ, ರಾಘವ ಚೇರಾಲು, ಮುಹಮ್ಮದ್ ಕೈಕಂಬ, ಹಮೀದ್, ತಾಜುದ್ದೀನ್ ಕುಂಬಳೆ ಮಾತನಾಡಿದರು. ಪ್ರಧಾನ ಕೃಷಿ ಅಧಿಕಾರಿ ಪಿ.ರಾಘವೇಂದ್ರ ಸ್ವಾಗತಿಸಿ, ಮೀಂಜ ಕೃಷಿ ಭವನದ ಕೃಷಿ ಅಧಿಕಾರಿ ಎ.ಚಂಚಲಾ ವಂದಿಸಿದರು.

.jpeg)
.jpeg)
