ಬಾಂಗ್ಲಾದೇಶವು ಭಾರತದೊಂದಿಗೆ ಗಡೀಪಾರು ಒಪ್ಪಂದವನ್ನು ಹೊಂದಿದೆ ಎಂಬುದಾಗಿ ಎಂದು ಪತ್ರವೊಂದರಲ್ಲಿ ನೆನಪಿಸಿರುವ ಸಚಿವಾಲಯವು, ಹಸೀನಾ ಬಾಂಗ್ಲಾದೇಶಕ್ಕೆ ಮರಳುವಂತೆ ನೋಡಿಕೊಳ್ಳುವುದು ಭಾರತದ ಬದ್ಧತೆಯಾಗಿದೆ ಎಂದು ಹೇಳಿದೆ.
''ದೇಶವೊಂದರಲ್ಲಿ, ಮಾನವತೆಯ ವಿರುದ್ಧದ ಅಪರಾಧ ಪ್ರಕರಣದಲ್ಲಿ ದೋಷಿಯಾಗಿರುವ ವ್ಯಕ್ತಿಗಳಿಗೆ ಆಶ್ರಯ ನೀಡುವುದು ಅತ್ಯಂತ ಸ್ನೇಹವಿರೋಧಿ ಕ್ರಮವಾಗಿದೆ ಹಾಗೂ ಅದು ನ್ಯಾಯಕ್ಕೆ ವಿರುದ್ಧವಾಗಿದೆ'' ಎಂದು ಪತ್ರದಲ್ಲಿ ಹೇಳಲಾಗಿದೆ.
ಹಸೀನಾ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ ಎನ್ನಲಾಗಿದೆ.




