HEALTH TIPS

ಇಂದಿನ ಸಿಂಡಿಕೇಟ್ ಸಭೆ ಮುಂದೂಡಿದ ಕೇರಳ ವಿ.ವಿ.ಉಪಕುಲಪತಿ: ಭದ್ರತೆಯ ಕೊರತೆಯ ಕಳವಳ ನೀಡಿದ ವಿ.ಸಿ

ತಿರುವನಂತಪುರಂ: ಪೋಲೀಸರು ತಮಗೆ ಭದ್ರತೆ ಒದಗಿಸುವಲ್ಲಿ ನಿಷ್ಕ್ರಿಯರಾಗಿದ್ದಾರೆ ಮತ್ತು ದೂರು ದಾಖಲಿಸಿದ್ದರೂ ಸೆನೆಟ್ ಸಭೆಯ ಸಮಯದಲ್ಲಿ ತಮ್ಮನ್ನು ವಶಕ್ಕೆ ಪಡೆದವರ ವಿರುದ್ಧ ಯಾವುದೇ ಪ್ರಕರಣ ದಾಖಲಿಸುತ್ತಿಲ್ಲ ಎಂದು ಕೇರಳ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಮೋಹನನ್ ಕುನ್ನುಮ್ಮಲ್ ರಾಜ್ಯಪಾಲರು ಮತ್ತು ಡಿಜಿಪಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ಬಳಿಕ, ಇಂದು ನಡೆಸಬೇಕಿದ್ದ ಸಿಂಡಿಕೇಟ್ ಸಭೆ ಮುಂದೂಡಿರುವುದಾಗಿ ಕುಲಪತಿ ಸೋಮವಾರ ತಿಳಿಸಿದರು. ಇದರೊಂದಿಗೆ ಸರ್ಕಾರ ಮತ್ತು ವಿಸಿ ನಡುವಿನ ಜಗಳ ತೀವ್ರಗೊಂಡ ಹಂತದಲ್ಲಿದೆ.  


12 ರಂದು ನಡೆದ ಸೆನೆಟ್ ಸಭೆಯಲ್ಲಿ ನಡೆದ ಅಹಿತಕರ ಘಟನೆಗಳಿಂದ ಉಪಕುಲಪತಿ ಕೋಪಗೊಂಡರು. ಸೆನೆಟ್ ಮೂರುವರೆ ಗಂಟೆಗಳ ಕಾಲ ಗೊಂದಲದಲ್ಲಿ ಮುಳುಗಿತ್ತು. ಎಡಪಂಥೀಯ ಸದಸ್ಯರು ಫಲಕಗಳೊಂದಿಗೆ ಉಪಕುಲಪತಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಉಪಕುಲಪತಿಯ ರಾಜೀನಾಮೆಗೆ ಒತ್ತಾಯಿಸಿ ಅವರ ಪ್ರತಿಭಟನೆ ನಡೆಯಿತು. ಸಿಪಿಎಂ ಸೆನೆಟ್ ಸದಸ್ಯರು ುಪಕುಲಪತಿಯನ್ನು ಸುತ್ತುವರೆದರು. ಹಲವಾರು ಗಂಟೆಗಳ ಕಾಲ ಗೊಂದಲ ಮುಂದುವರಿದ ಕಾರಣ, ಉಪಕುಲಪತಿ ಸೆನೆಟ್ ಸಭೆಯನ್ನು ವಿಸರ್ಜಿಸಿದರು.

ಹೊರಬಂದ ಉಪಕುಲಪತಿ ಡಾ. ಮೋಹನನ್ ಕುನ್ನುಮ್ಮೆಲ್ ಅವರನ್ನು ಎಸ್‍ಎಫ್‍ಐ ಸದಸ್ಯರು ತಡೆದರು. ಅವರು ಉಪಕುಲಪತಿಯವರ ಕಾರನ್ನು ಗುದ್ದಿ ಆತಂಕ ಸೃಷ್ಟಿಸಿದರು. ಪೋಲೀಸರು ಸ್ಥಳದಲ್ಲಿದ್ದರೂ, ಪ್ರತಿಭಟನಾಕಾರರನ್ನು ಚದುರಿಸಲಿಲ್ಲ. ಆ ಸಮಯದಲ್ಲಿ ಯಾವುದೇ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಇದ್ದಿರಲಿಲ್ಲ.

ಅರ್ಧ ಗಂಟೆ ಕಾರಿನಲ್ಲಿ ಕಾದಿದ್ದರೂ ಪೋಲೀಸರು ಪ್ರತಿಭಟನಾಕಾರರನ್ನು ಚದುರಿಸುತ್ತಿಲ್ಲ ಎಂದು ಅರಿತುಕೊಂಡ ಉಪಕುಲಪತಿಯವರು, ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರನ್ನು ದೂರವಾಣಿಯಲ್ಲಿ ಸಂಪರ್ಕಿಸಿದರು. ರಾಜ್ಯಪಾಲರು ಡಿಜಿಪಿಗೆ ಕರೆ ಮಾಡಿ ಸೂಚನೆ ನೀಡಿದ ನಂತರ, ಹಿರಿಯ ಪೋಲೀಸ್ ಅಧಿಕಾರಿಗಳು ವಿಶ್ವವಿದ್ಯಾಲಯಕ್ಕೆ ತಲುಪಿ ಪ್ರತಿಭಟನಾಕಾರರನ್ನು ತೆಗೆದುಹಾಕಿದರು.

ಇದರೊಂದಿಗೆ, ಕುಲಪತಿಯವರು ಸರ್ಕಾರಿ ವಿಶ್ವವಿದ್ಯಾಲಯದ ಪ್ರಧಾನ ಕಚೇರಿಯಿಂದ ಹೊರಬರಲು ಸಾಧ್ಯವಾಯಿತು. ಭದ್ರತೆ ಇಲ್ಲ ಎಂಬ ಕುಲಪತಿಯವರ ಹೇಳಿಕೆಗೆ ಈ ಘಟನೆಯೇ ಆಧಾರವಾಗಿದೆ.

ಕುಲಪತಿಯವರ ವಿರುದ್ಧದ ಹಿಂಸಾಚಾರದ ಕುರಿತು ವಿಶ್ವವಿದ್ಯಾಲಯವು ಡಿಜಿಪಿಗೆ ದೂರು ನೀಡಿದ್ದರೂ, ಯಾವುದೇ ಪ್ರಕರಣ ದಾಖಲಾಗಿಲ್ಲ. ಹಿಂಸಾಚಾರವನ್ನು ವೀಕ್ಷಿಸಿದ ಪೆÇಲೀಸ್ ಅಧಿಕಾರಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ.

ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ, ಪೆÇಲೀಸರು ತಮಗೆ ಭದ್ರತೆ ನೀಡುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಮತ್ತು ವಿಶ್ವವಿದ್ಯಾಲಯದ ಅಧಿಕಾರಿಗಳು ಮತ್ತು ಉದ್ಯೋಗಿಗಳಿಗೆ ರಕ್ಷಣೆ ನೀಡಬೇಕೆಂಬ ಹೈಕೋರ್ಟ್ ಆದೇಶವನ್ನು ಉಲ್ಲಂಘಿಸಲಾಗಿದೆ ಎಂದು ಕುಲಪತಿಗಳು ಗಮನಸೆಳೆದಿದ್ದಾರೆ.

ಭದ್ರತಾ ಕೊರತೆಯಿಂದಾಗಿ ನಾಳೆಯ ಸಿಂಡಿಕೇಟ್ ಸಭೆಯನ್ನು ಮುಂದೂಡಲಾಗುತ್ತಿದೆ ಎಂದು ಕುಲಪತಿಗಳು ಡಿಜಿಪಿಗೆ ಪತ್ರ ಬರೆದಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಖಚಿತಪಡಿಸಿಕೊಂಡ ನಂತರವೇ ಸಿಂಡಿಕೇಟ್ ಸಭೆಯನ್ನು ನಡೆಸಬಹುದು ಎಂದು ಕುಲಪತಿಗಳು ಅಭಿಪ್ರಾಯಪಟ್ಟಿದ್ದಾರೆ.

ಕಳೆದ ಸಿಂಡಿಕೇಟ್ ಸಭೆಯು ಅಮಾನತುಗೊಂಡ ರಿಜಿಸ್ಟ್ರಾರ್ ಡಾ. ಅನಿಲ್ ಕುಮಾರ್ ಅವರನ್ನು ಮತ್ತೆ ನೇಮಿಸುವ ನಿರ್ಣಯವನ್ನು ಅಂಗೀಕರಿಸಿದ್ದರೂ, ಕುಲಪತಿಗಳು ಅದನ್ನು ಸ್ವೀಕರಿಸಲಿಲ್ಲ. ಬದಲಾಗಿ, ನಿರ್ಣಯವನ್ನು ರಾಜ್ಯಪಾಲರಿಗೆ ಪರಿಗಣನೆಗೆ ಕಳುಹಿಸಲಾಗಿದೆ. ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries