ಮಂಜೇಶ್ವರ: ಮಂಜೇಶ್ವರ ಪೊಲೀಸ್ ಆಣೆ ವ್ಯಾಪ್ತಿಯ ಉಪ್ಪಳ ಭಗವತೀ ರಸ್ತೆ ಅಂಗನವಾಡಿ ಸನಿಹದ ನಿವಾಸಿ ಅಮ್ಜದ್ ಆಲಿ ಎಂಬವರ ಪುತ್ರ, ಪ್ಲಸ್‍ಟು ವಿದ್ಯಾರ್ಥಿ ಮಹಮ್ಮದ್ ಕೈಫ್(17)ನಾಪತ್ತೆಯಾಗಿರುವ ಬಗ್ಗೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಸೋಮವಾರ ಮಧ್ಯಾಹ್ನ ಮನೆಯಿಂದ ಹೊರಗೆ ತೆರಳಿದ್ದ ಈತ ಮನೆಗೆ ವಾಪಸಾಗಿಲ್ಲ ಎಂದು ಮನೆಯವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಎಂಟು ತಿಂಗಳ ಹಿಂದೆ ಈತ ನಾಪತ್ತೆಯಾಗಿದ್ದು, ಪೊಲೀಸರು ನಡೆಸಿದ ಹುಡುಕಾಟದಿಂದ ಈತನನ್ನು ಮುಂಬೈಯಿಂದ ಪತ್ತೆಹಚ್ಚಿ ಕರೆತರಲಾಗಿತ್ತು.




