HEALTH TIPS

ಬಿಹಾರ ಚುನಾವಣೆ | 'ಸ್ಟ್ರಾಂಗ್‌ ರೂಮ್‌' ಭದ್ರತೆ ಹೆಚ್ಚಿಸಲು ಆರ್‌ಜೆಡಿ ಒತ್ತಾಯ

ನವದೆಹಲಿ: ಬಿಹಾರದಲ್ಲಿ ಮೊದಲ ಸುತ್ತಿನ ಮತದಾನಕ್ಕೆ ಬಳಸಿರುವ ಇವಿಎಂಗಳನ್ನು ಇಟ್ಟಿರುವ 'ಸ್ಟ್ರಾಂಗ್‌ ರೂಮ್‌'ಗಳ ಭದ್ರತೆ ಹೆಚ್ಚಿಸಬೇಕೆಂದು ಕೋರಿ ಆರ್‌ಜೆಡಿಯು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ಅವರಿಗೆ ಪತ್ರ ಬರೆದಿದೆ.

ಸ್ಟ್ರಾಂಗ್‌ರೂಂಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಕುರಿತ ವರದಿಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದು, ಭದ್ರತೆಗೆ ಸಂಬಂಧಿಸಿದಂತೆ ಇಲ್ಲಿ ಅನುಸರಿಸುತ್ತಿರುವ ಶಿಷ್ಟಾಚಾರಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಚುನಾವಣಾ ಪ್ರಕ್ರಿಯೆಯ ಸಮಗ್ರತೆಯು ಪ್ರಜಾಪ್ರಭುತ್ವ ವ್ಯವಸ್ಥೆಯ ಮೂಲ ಆಧಾರವಾಗಿದೆ. ಚುನಾವಣೆಗಳ ಪಾವಿತ್ರ್ಯದ ವಿಷಯದಲ್ಲಿ ಸಾರ್ವಜನಿಕ ವಿಶ್ವಾಸವು ಸಂಪೂರ್ಣವಾಗಿ ಇವಿಎಂಗಳ ಪಾರದರ್ಶಕತೆ ಮತ್ತು ಸುರಕ್ಷತೆಯ ಮೇಲೆ ಅವಲಂಬಿತವಾಗಿದೆ ಎಂದು ಆರ್‌ಜೆಡಿ ರಾಷ್ಟ್ರೀಯ ವಕ್ತಾರ, ಸಂಸದ ಮನೋಜ್ ಝಾ ಪತ್ರದಲ್ಲಿ ತಿಳಿಸಿದ್ದಾರೆ.

ಪ್ರಸ್ತುತ ಇವಿಎಂಗಳನ್ನು ಸಂಗ್ರಹಿಸಿಟ್ಟಿರುವ 'ಸ್ಟ್ರಾಂಗ್‌ ರೂಮ್‌'ಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿರುವ ಬಗ್ಗೆ ವರದಿಯಾಗಿರುವುದರಿಂದ ಈ ಪತ್ರ ಬರೆಯುತ್ತಿರುವುದಾಗಿ ಅವರು ಹೇಳಿದ್ದಾರೆ. ವಿದ್ಯುತ್‌ ವ್ಯತ್ಯಯ ಘಟನೆಯು ಇವಿಎಂಗಳ ಭದ್ರತೆಯ ಬಗ್ಗೆ 'ಗಂಭೀರ ಕಳವಳ' ಉಂಟುಮಾಡಿದೆ ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries