ಕಾಸರಗೋಡು: ನಗರದ ಶ್ರೀ ಧರ್ಮ ಶಾಸ್ತಾ ಸೇವಾ ಸಂಘದ ಈ ವರ್ಷದ ಶಬರಿಮಲೆ ಯಾತ್ರೆಯ ಮುದ್ರಾಧಾರಣೆ ಕಾರ್ಯಕ್ರಮ ಹಾಗೂ ಶಬರಿಮಲೆ ಶ್ರೀ ಅಯ್ಯಪ್ಪ ದೀಪೋತ್ಸವ ಸಿದ್ಧತಾ ಮಹಾಸಭೆ ನ. 17ರಂದು ಜರುಗಲಿದೆ.
ಅಂದು ಬೆಳಗ್ಗೆ 5ಕ್ಕೆ ಮಂದಿರದಲ್ಲಿ ಮುದ್ರಾಧಾರಣೆ ನಡೆಯಲಿರುವುದು. ನಂತರ, ಡಿಸಂಬರ್ ತಿಂಗಳಲ್ಲಿ ಜರಗಲಿರುವ 60 ನೇ ವರ್ಷದ ಶಬರಿಮಲೆ ಶ್ರೀ ಅಯ್ಯಪ್ಪ ದೀಪೆÇೀತ್ಸವದ ಸಿದ್ದತೆಗಾಗಿ ಮಹಾಸಭೆ Pನಡೆಯುವುದು. ಸಮಿತಿಯ ಪದಾಧಿಕಾರಿಗಳು, ಸದಸ್ಯರು ಎಲ್ಲಾ ಅಯ್ಯಪ್ಪ ಭಕ್ತರು ಹಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಶ್ರೀ ಧರ್ಮಶಾಸ್ತಾ ಸೇವಾ ಸಂಘದ ಅಧ್ಯಕ್ಷ ಉದ್ಯಮಿ ಸುರೇಶ್, ಕಾರ್ಯಾಧ್ಯಕ್ಷ ಡಾ.ಕೆ.ಎನ್. ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಧನಂಜಯ ಮಾನ್ಯ ಹಾಗೂ ಕೋಶಾಧಿಕಾರಿ ಲವ ಮೀಪುಗುರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




