HEALTH TIPS

ವಂದೇ ಮಾತರಂ ಗೀತೆ ಭಾರತೀಯರ ಆತ್ಮದ ಧ್ವನಿ: ಅಮಿತ್ ಶಾ

ನವದೆಹಲಿ: 'ವಂದೇ ಮಾತರಂ' ಗೀತೆ ಇಂದಿಗೂ ದೇಶದ ಜನರ ಹೃದಯದಲ್ಲಿ ರಾಷ್ಟ್ರೀಯತೆಯ ಕಿಡಿಯನ್ನು ಹೊತ್ತಿಸುತ್ತಲೇ ಇದೆ. ಯುವಜನರಲ್ಲಿ ಏಕತೆ, ದೇಶಭಕ್ತಿ ಮತ್ತು ಶಕ್ತಿಯ ಮೂಲವಾಗಿ ಉಳಿದಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಹೇಳಿದ್ದಾರೆ.

2025ರ ನವೆಂಬರ್ 7 ರಿಂದ 2026ರ ನವೆಂಬರ್ 7ರವರೆಗೆ ನಡೆಯುವ ಭಾರತದ ರಾಷ್ಟ್ರೀಯ ಗೀತೆ 'ವಂದೇ ಮಾತರಂ' ರಚನೆಯ 150ನೇ ವಾರ್ಷಿಕೋತ್ಸವದ ವರ್ಷಾಚರಣೆ ಕುರಿತು ಪೋಸ್ಟ್‌ ಹಂಚಿಕೊಂಡಿರುವ ಶಾ, 'ಈ ಹಾಡು ಕೇವಲ ಪದಗಳ ಸಂಗ್ರಹವಲ್ಲ, ಅದು ಭಾರತೀಯರ ಆತ್ಮದ ಧ್ವನಿಯಾಗಿದೆ' ಎಂದು ಹೇಳಿದ್ದಾರೆ.

'ಇಂಗ್ಲಿಷರ ಆಡಳಿತದ ವಿರುದ್ಧ, 'ವಂದೇ ಮಾತರಂ' ಗೀತೆ ರಾಷ್ಟ್ರವನ್ನು ಒಂದುಗೂಡಿಸಿತು ಜತೆಗೆ ಸ್ವಾತಂತ್ರ್ಯದ ಪ್ರಜ್ಞೆಯನ್ನು ಬಲಪಡಿಸಿತು. ಮಾತೃಭೂಮಿಗಾಗಿ ಸಮರ್ಪಣೆ, ಹೆಮ್ಮೆ ಮತ್ತು ತ್ಯಾಗದ ಮನೋಭಾವವನ್ನು ಜನರಲ್ಲಿ ಜಾಗೃತಗೊಳಿಸಿತು' ಎಂದಿದ್ದಾರೆ.

'ನಮ್ಮ ರಾಷ್ಟ್ರೀಯ ಗೀತೆಗೆ ಈ ವರ್ಷ 150 ವರ್ಷ ತುಂಬುತ್ತಿದೆ. ಹೀಗಾಗಿ ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಒಟ್ಟಾಗಿ ಪೂರ್ಣ ಆವೃತ್ತಿಯನ್ನು ಹಾಡುವ ಮೂಲಕ ಈ ಗೀತೆಯನ್ನು ಸ್ಮರಿಸಬೇಕು. ಇದರಿಂದ ಅದು ಭವಿಷ್ಯದ ಪೀಳಿಗೆಗೆ ಸ್ಫೂರ್ತಿಯ ಕೇಂದ್ರವಾಗಿ ಉಳಿಯುತ್ತದೆ' ಶಾ ಹೇಳಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries