ಕಾಸರಗೋಡು: ಯಂತ್ರದ ಮೂಲಕ ತೆಂಗಿನ ಕಾಯಿ ಕೀಳಲು ಮರ ಹತ್ತಿದ ವ್ಯಕ್ತಿಯೊಬ್ಬರು ಯಂತ್ರ ದೋಷದಿಂದ ಮರದಲ್ಲಿ ಸಿಲುಕಿದ ಘಟನೆ ಉದುಮದಲ್ಲಿ ನಡೆದಿದ್ದು, ಬಳಿಕ ಅವರನ್ನು ಅಗ್ನಿ ಶಾಮಕ ದಳದ ಸಿಬ್ಬಂದಿ ರಕ್ಷಿಸಿದರು. ಮಂಗಳವಾರ ಬೆಳಿಗ್ಗೆ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ.
60 ರ ಹರೆಯದ ರಾಜು ಎಂಬವರು ತೆಂಗಿನಕಾಯಿ ಕೀಳುವ ಸಂದರ್ಭದಲ್ಲಿ ಯಂತ್ರದಲ್ಲಿನ ತಾಂತ್ರಿಕ ದೋಷದಿಂದ ಮರದಿಂದ ಕೆಳಗಿಳಿಯಲಾಗದೆ ಸಿಲುಕಿಕೊಂಡಿದ್ದರು. ಬಳಿಕ ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಯಿತು. ಸ್ಥಳಕ್ಕೆ ಆಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿ ರಾಜು ಅವರನ್ನು ಮರದಿಂದ ಕೆಳಗೆ ಇಳಿಸಿದರು.




